Ticker

6/recent/ticker-posts

ಬಂಬ್ರಾಣದಲ್ಲಿ ಮನೆಯ ಬೀಗ‌ ಮುರಿದು ಚಿನ್ನಾಭರಣ, ನಗದು ದರೋಡೆ


 ಕುಂಬಳೆ: ಇಲ್ಲಿನ ಬಂಬ್ರಾಣದಲ್ಲಿ ಮನೆಯ ಬೀಗ ಮುರಿದು ಭಾರೀ‌ ಮೊತ್ತದ ನಗ, ನಗದು ದರೋಡೆ ನಡೆದಿದೆ. ಮಲಪ್ಪುರಂ ತಾನೂರು ನೌಷಾದ್ ಎಂಬವರ ಪತ್ನಿಯ ಮನೆಯಲ್ಲಿ ನಡೆದ ದರೋಡೆಯಲ್ಲಿ  9 ಪವನು ಚಿನ್ನಾಭರಣ ಹಾಗೂ 85000 ರೂ ಕಳವುಗೈಯ್ಯಲಾಗಿದೆ. ನೌಷಾದ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿದರು. ಮೇ.25 ರಂದು ರಾತ್ರಿ 7.30 ರಿಂದ 8.30 ರ ಮಧೈ ದರೋಡೆ ನಡೆದಿರುವುದಾಗಿ ಶಂಕಿಸಲಾಗಿದೆ. ನೌಷಾದ್ ರ ಪತ್ನಿ ಮಕ್ಕಳು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದು ಮನೆಯಲ್ಲಿದ್ದ ತಂದೆಯವರು ಅಂಗಡಿಗೆ ಹೋಗಿ ಹಿಂತಿರುಗಿದಾಗ ಕಳವು ನಡೆದ ಬಗ್ಗೆ ತಿಳಿಯಲಾಗಿದೆ.

Post a Comment

0 Comments