ಕೊಚ್ಚಿನ್: ಐ.ಎನ್.ಎಸ್.ವಿಕ್ರಾಂತ್ ಎಂಬ ಯುದ್ದ ನೌಕೆಯ ಮಾಹಿತಿ ಕೇಳಿ ಫೋನ್ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಜಿಕ್ಕೋಡ್ ನಡಕಾವ್ ನಿವಾಸಿ ಮುಜೀಬ್ ರಹಮಾನ್ ಬಂಧಿತ ಆರೋಪಿ. ಈತನನ್ನು ಕೊಚ್ಚಿನ್ ಹಾರ್ಬರ್ (ಬಂದರು) ಪೊಲೀಸರು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಈತ ಕೊಚ್ಚಿನ್ ನೌಕಾ ನೆಲೆಗೆ ಫೋನ್ ಮಾಡಿದ್ದನು. ಐ.ಎನ್.ಎಸ್ ವಿಕ್ರಾಂತ್ ಈಗ ಎಲ್ಲಿದೆಯೆಂದೂ ಅದರ ಲೋಕೇಶನ್ ಬೇಕೆಂದೂ ಹೇಳಿದ್ದನು. ಈ ಬಗ್ಗೆ ಹಾರ್ಬರ್ ಪೊಲೀಸರಿಗೆ ದೂರು ನೀಡಲಾಯಿತು. ಅದರಂತೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈತ ಪಾಕಿಸ್ತಾನದ ಬೇಹುಗಾರಿಕ ತಂಡದ ಸದಸ್ಯರ ಜತೆ ನಿಕಟ ಸಂಪರ್ಕ ಇರಿಸಿರುವ ವ್ಯಕ್ತಿ ಎಂಬ ಶಂಕೆ ಉಂಟಾಗಿದೆ
0 Comments