Ticker

6/recent/ticker-posts

Ad Code

ಉಳ್ಳಾಲ ಬಳಿ ಗುಡ್ಡ ಕುಸಿದು ಮನೆ‌ ಮೇಲೆ ಬಿದ್ದು ಇಬ್ಬರು ಮಕ್ಕಳ ಸಹಿತ ಮೂರು ಮಂದಿ ಸಾವು, ಮೂವರ ರಕ್ಷಣೆ


 ಉಳ್ಳಾಲ: ಮಂಜನಾಡಿ ಗ್ರಾಮದ ಮೊಂಟೆಪದವು ಹಿತ್ತಿಲುಕೋಡಿ ಕೊಪ್ಪಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ಮೂರು ‌ಮಂದಿ ಮೃತಪಟ್ಟ ದಾರುಣ ಘಟನೆ ‌ನಡೆದಿದೆ. ಮನೆ ಮಾಲಕ ಕಾಂತಪ್ಪ ಪೂಜಾರಿಯವರ ಪತ್ನಿ ಪ್ರೇಮ(58), ಇವರ ಪುತ್ರ ಸೀತಾರಾಮರ ಮಕ್ಕಳಾದ ಆರ್ಯನ್ (3), ಅಶ್ವಿನ್ (ಒಂದೂವರೆ ವರ್ಷ) ಮೃತಪಟ್ಟವರು.

ಕುಸಿದ ಮನೆಯೊಳಗೆ ಸಿಲುಕಿದ್ದ ಕಾಂತಪ್ಪ ಪೂಜಾರಿ, ಪುತ್ರ ಸೀತಾರಾಮ, ಸೀತಾರಾಮರ ಪತ್ನಿ ಅಶ್ವಿನಿ ಎಂಬಿವರನ್ನು ರಕ್ಷಿಸಲಾಗಿದೆ.



ಶುಕ್ರವಾರ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ಈ ದುರಂತದಲ್ಲಿ ಮನೆ ಮಾಲಕ ಕಾಂತಪ್ಪ ಪೂಜಾರಿಯವರ ಪತ್ನಿ ಪ್ರೇಮಾ(58) ಸ್ಥಳದಲ್ಲೇ ಮೃತಪಟ್ಟಿದ್ದರು. ಕಾಂತಪ್ಪರ ಮಗ ಸೀತಾರಾಮ ಅವರ ಪತ್ನಿ ಅಶ್ವಿನಿ ಹಾಗೂ ಅವರ ಇಬ್ಬರು ಸಣ್ಣ ಮಕ್ಕಳು ಕುಸಿದ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದರು. ಈ ಪೈಕಿ ಮೂರು ವರ್ಷದ ಮಗು ಆರ್ಯನ್ ನನ್ನು ಮಧ್ಯಾಹ್ನದ ವೇಳೆ ರಕ್ಷಣಾ ತಂಡ ಅವೇಷಗಳಡಿಯಿಂದ ಹೊರ ತೆಗೆದಿತ್ತು. ಆದರೆ ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು. ಬಳಿಕ ತಾಯಿ ಹಾಗೂ ಇನ್ನೊಂದು ಮಗು ಆಯುಷ್ ನನ್ನು ಹೊರತೆಗೆಯಲಾಗಿದೆ. ಆದರೆ ಮಗು ಮೃತಪಟ್ಟಿತ್ತು. ಅಶ್ವಿನಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Post a Comment

0 Comments