ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಜ್ಜಾನ - ಮಲಂಗರೆ ಸಂಪರ್ಕ ರಸ್ತೆ ಬದಿ ಗುಡ್ಡೆ ನಿರಂತರ ಮಳೆಗೆ ಕುಸಿಯುತ್ತಿದ್ದು ರಸ್ತೆಯಲ್ಲಿ ಓಡಾಡುವವರಿಗೆ ಆತಂಕ ಉಂಟಾಗಿದೆ. ಇಲ್ಲಿನ ರಸ್ತೆ ಬದಿಗಳ ಗುಡ್ಡೆಗಳು ಜರಿದು ರಸ್ತೆಗೆ ಬರುತ್ತಿದ್ದು ಪಜ್ಜಾನದಿಂದ ಮಲಂಗರೆ,ಮುಂಡಿತ್ತಡ್ಕ ,ಪುತ್ತಿಗೆ,ಉಕ್ಕಿನಡ್ಕ ಸಂಪರ್ಕ ರಸ್ತೆ ಇದಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

0 Comments