Ticker

6/recent/ticker-posts

ರಾಜ್ಯದಲ್ಲಿ ಮತ್ತೆ ಮೊಳಗಲಿರುವ ಚುನಾವಣೆಯ ಕಹಳೆ, ನವಂಬರ್, ಡಿಸಂಬರ್ ತಿಂಗಳಲ್ಲಿ ಪಂಚಾಯತು ಚುನಾವಣೆ


 ತಿರುವನಂತಪುರಂ: ರಾಜ್ಯದಲ್ಲಿ ಮತ್ತೆ ಚುನಾವಣೆಯ ಕಹಳೆ ಮೊಳಗಲಿದೆ. ಮುಂದಿನ ನವಂಬರ್, ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಪಂಚಾಯತು ಚುನಾವಣೆಗಳು ನಡೆಯಲಿವೆ. ನವಂಬರ್ ಕೊನೆಯ ವಾರ ಹಾಗೂ ಡಿಸೆಂಬರ್ ಮೊದಲ ವಾರದಲ್ಲಿ ಪಂಚಾಯತು ಚುನಾವಣೆ ನಡೆಯಲಿರುವುದು. ವಾರ್ಡು ವಿಭಜನೆಗೆ ಸಂಬಂದಪಟ್ಟ ಕೆಲಸಗಳು ಅಂತಿಮ‌ ಹಂತದಲ್ಲಿದೆ.  ಚುನಾವಣೆಯ ಪ್ರಕ್ರಿಯೆ ಕೂಡಲೇ  ಆರಂಭಗೊಳ್ಳಲಿದೆಯೆಂದು ಚುನಾವಣಾ ಆಯೋಗ ತಿಳಿಸಿದೆ. ರಾಜ್ಯದಲ್ಲಿ 1510 ವಾರ್ಡುಗಳು ಹೆಚ್ಚಾಗಿವೆ. ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿ ಸಹಿತ ವಿವಿದ ವಿಷಯಗಳ ಕುರಿತು ಪ್ರಕ್ರಿಯೆಗಳು ನಡೆಯಲಿದೆ. ಡಿಸೆಂಬರ್ 3 ನೇ ವಾರ ಹೊಸ ಆಡಳಿತ ಬರುವ ರೀತಿಯಲ್ಲಿ ಚುನಾವಣೆ ನಡೆಯಲಿದೆ‌.

Post a Comment

0 Comments