Ticker

6/recent/ticker-posts

Ad Code

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಮನೆಗೆ ಬೇಟಿ ನೀಡಿದ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಪದಾಧಿಕಾರಿಗಳು


 ಮಂಗಳೂರು:  ಸುಹಾಸ್ ಶೆಟ್ಟಿ ‌ಕೊಲೆ ಪ್ರಕರಣದ ತನಿಖೆಯನ್ನು ಎನ್.ಐ.ಎ.ಗೆ ವಹಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಸುನಿಲ್. ಪಿ.ಆರ್.ಒತ್ತಾಯಿಸಿದ್ದಾರೆ.  ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ   ಸಹಿತ ಜಿಲ್ಲಾ ಸಮಿತಿಯ ನಿಯೋಗ ಸುಹಾಸ್ ಶೆಟ್ಟಿ ಅವರ ತಂದೆ, ತಾಯಿಯನ್ನು ಬೇಟಿಯಾಗಿ ಮಾತುಕತೆ ನಡೆಸಿದ ನಂತರ ಈ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ‌ಕಾಂಗ್ರೆಸ್ ಸರಕಾರವು ಮುಸ್ಲಿಂ ಓಲೈಕೆಗಾಗಿ ಹಿಂದೂ ಸಂಘಟನಾ ಕಾರ್ಯಕರ್ತರನ್ನು ಕೊಲೆಗೈಯ್ಯುತ್ತಿದೆ. ಸಂಘಪರಿವಾರ ಕಾರ್ಯಕರ್ತರನ್ನು ಕಾರ್ಯಾಚರಿಸಲು ಬಿಡದ ಸ್ಥಿತಿ ಉಂಟಾಗಿದೆ. ಸುಹಾಸ್ ಶೆಟ್ಟಿಯವರಿಗೆ ಕೊಲೆ ಬೆದರಿಕೆ ಇದ್ದರೂ ಸಹ ರಕ್ಷಣೆ ನೀಡಲು‌ ಪೊಲೀಸರು ಮುಂದಾಗಲಿಲ್ಲ. ಅಲ್ಲದೆ ಸುಹಾಸ್ ಶೆಟ್ಟಿಯವರಿಗೆ ಪೊಲೀಸರು‌ ಮಾನಸಿಕ ಕಿರುಕುಳ ನೀಡುತ್ತಿದ್ದರು. ಮಂಗಳೂರಿನಲ್ಲಿ ನಡೆದ ಈ ಹಿಂದಿನ ಹಲವು ಪ್ರಕರಣಗಳಲ್ಲಿ ಸುಹಾಸ್ ಶೆಟ್ಟಿ ನಿರಪರಾಧಿಯಾಗಿದ್ದರೂ ಪೊಲೀಸರು ಅವರ ಹೆಸರನ್ನು  ಸೇರಿಸಿದ್ದಾರೆ. ಸುಹಾಸ್ ಶೆಟ್ಟಿ ‌ಕೊಲೆ ಪ್ರಕರಣಕ್ಕೆ ಭಯೋತ್ಪಾದಕ ನಂಟು ಇದೆಯೆಂಬ ಸಂಶಯವಿದೆ ಎಂದವರು ಹೇಳಿದರು

Post a Comment

0 Comments