ಉಪ್ಪಳ : ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವಸ್ಥಾನ ಶ್ರೀ ಮೂಕಾಂಬಿಕಾ ದೇವಿಯ ಪೀಠಪ್ರತಿಷ್ಠೆ,ಪರಿವಾರ ಸಾನಿಧ್ಯಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮಾಣಿಲ ಶ್ರೀಧಾಮದ ಶ್ರೀ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಅತಿಥಿ ಗಣ್ಯರ ಸಹಭಾಗಿತ್ವದಲ್ಲಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ಮಂಗಳೂರು ವಹಿಸಿದ್ದರು.ಧಾರ್ಮಿಕ ಮುಂದಾಳು ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ,ದಯಾ ಸಾಗರ್ ಚೌಟ ,ಕಾಂತಿಶೆಟ್ಟಿ ಬೆಂಗಳೂರು, ಯುವ ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರ್,ಸೌಂದರ್ಯ ರಮೇಶ್ ಬೆಂಗಳೂರು, ಮುಖ್ಯ ಅತಿಥಿಗಳಾಗಿದ್ದರು.
ಧಾರ್ಮಿಕ ಮುಂದಾಳುಗಳಾದ ಪ್ರಭಾಕರ ಸೇನವ,ಡಾ.ಶ್ರೀಧರ್ ಭಟ್,ನ್ಯಾಯವಾದಿ ಮುರಳಿಧರ ಬಳ್ಳಾಕುರಾಯ, ಕ.ಸಾ.ಪ.ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ,ಮಂಗಲ್ಪಾಡಿ ಗ್ರಾ.ಪಂ ಸದಸ್ಯೆ ಸುಧಾ ಗಣೇಶ್,ಯುವ ಸಂಘಟಕ ಕಾರ್ತಿಕ್ ಶೆಟ್ಟಿ ಮಜಿಬೈಲ್,ಹರಿಪ್ರಸಾದ್ ಯಾದವ್ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ತಿಂಬರ,ಸಂಜೀವ ಶೆಟ್ಟಿ ಮುಂಬೈ,ಕೃಷ್ಣ ಮಣಿಯಾಣಿ,ಹರಿಪ್ರಸಾದ್ ಯಾದವ್ ಅಡ್ಯನಡ್ಕ ಸಭೆಯಲ್ಲಿ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಡಾ.ಸದಾಶಿವ ಶೆಟ್ಟಿ ಕುಳೂರು,ಸೌದರ್ಯ ರಮೇಶ್, ಬ್ರಹ್ಮಕಲಶೋತ್ಸ ಸಮಿತಿ ಕಾರ್ಯಾಧ್ಯಕ್ಷ ದುಗ್ಗಪ್ಪ ಶೆಟ್ಟಿ,ಕಾರ್ಯದರ್ಶಿ ಗಣೇಶ್ ಜೆ.ಎನ್.ಪ್ರತಾಪನಗರ ಇವರನ್ನು ಸನ್ಮಾನಿಸಲಾಯಿತು.ಗೀತಾಂಜಲಿ ಆಳ್ವ ತಿಂಬರ ಪ್ರಾರ್ಥನೆ ಹಾಡಿದರು ಬ್ರಹ್ಮಕಲಶೋತ್ಸವ ಕಾರ್ಯಧ್ಯಕ್ಷೆ ಮೀರಾ ಆಳ್ವ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ
ವಸಂತ ಕುಮಾರ್ ಮಯ್ಯ ವಂದಿಸಿದರು.ದಿವಾಕರ್ ಪ್ರತಾಪನಗರ ನಿರೂಪಿಸಿದರು.
0 Comments