ಬದಿಯಡ್ಕ: ಅಬಕಾರಿ ತಂಡದ ಕೈಯಿಂದ ತಪ್ಪಿಸಿಕೊಂಡು ಪರಾರಿಯಾದ ಮಾದಕವಸ್ತು ಪ್ರಕರಣದ ಆರೋಪಿಯನ್ನು ಎರಡನೇ ಪತ್ನಿಯ ಮನೆಯಿಂದ ಎಂಡಿಎಂಎ ಸಹಿತ ಬಂಧಿಸಿದ ಘಟನೆ ನಡೆದಿದೆ. ಉಪ್ಪಳ ನಿವಾಸಿ ಹಾಗೂ ಇದೀಗ ಪೆರ್ಲ ಕನ್ನಡಿಕಾನದಲ್ಲಿ ವಾಸಿಸುವ ಅಬ್ದುಲ್ ಲತೀಫ್ ಯಾನೆ ಪೋಕಿರಿ ಲತೀಫ್(43) ಬಂಧಿತ ಆರೋಪಿ. ಈತನನ್ನು 6.30 ಗ್ರಾಂ ಎಂಡಿಎಂಎ ಸಹಿತ ಪೆರ್ಲ ಕನ್ನಡಿಕಾನದಲ್ಲಿರುವ ಎರಡನೇ ಪತ್ನಿಯ ಮನೆಯಿಂದ ಬಂಧಿಸಲಾಗಿದೆ. ಮನೆಯಲ್ಲಿ ಎಂಡಿಎಂಎ ಇದೆಯೆಂಬ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದರು.
10 ದಿನಗಳ ಹಿಂದೆ ಲತೀಫ್ ಕಾರಿನಲ್ಲಿ ಸಾಗಿಸಲು ಯತ್ನಿಸಿದ 3.08 ಗ್ರಾಂ ಎಂಡಿಎಂಎ ಕುಂಬಳೆ ಎಕ್ಸ್ಪ್ರೆಸ್ ಅಧಿಕಾರಿಗಳು ವಶಪಡಿಸಿದ್ದರು. ಲತೀಫ್ ಅಂದಯ ಕಾರು ಬಿಟ್ಟು ಪರಾರಿಯಾಗಿದ್ದನು
0 Comments