Ticker

6/recent/ticker-posts

Ad Code

ಬೇಕಲ ಗೋಕುಲಂ ಗೋಶಾಲೆಯಲ್ಲಿ ವಳಕುಂಜ ಸಹೋದರಿಯರಿಂದ ನೃತ್ಯ ವೈಭವ


ಬೇಕಲದ ಗೋಕುಲಂ ಗೋಶಾಲೆಯ ಪರಂಪರಾ ವಿದ್ಯಾಪೀಠದಲ್ಲಿ ನಡೆಯುತ್ತಿರುವ ವೈಶಾಖ ನಟನಂ 2025 ರಾಷ್ಟ್ರೀಯ ನೃತ್ಯೋತ್ಸವದ ಎಂಟನೇ ದಿನದಂದು ವೈಷ್ಣವೀ ನಾಟ್ಯಾಲಯ ಪುತ್ತೂರು ಇದರ ನಿರ್ದೇಶಕಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ಶಿಷ್ಯೆಯರಾದ ವಳಕ್ಕುಂಜ ಸಹೋದರಿಯರು ಶಮಾ ವಿ ಎಂ ಹಾಗೂ ಶಾರ್ವಿ ವಿ ಎಂ ಇವರಿಂದ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯ ಕಾರ್ಯಕ್ರಮ ನೆರವೇರಿತು.

ನಟುವಾಂಗದಲ್ಲಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪುತ್ತೂರು, ಹಾಡುಗಾರಿಕೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ವಿದ್ವಾನ್ ವೆಳ್ಳಿಕೋತ್ ವಿಷ್ಣು ಭಟ್, ಮೃದಂಗದಲ್ಲಿ ವಿದ್ವಾನ್ ಗೀತೇಶ್ ಕುಮಾರ್ ನೀಲೇಶ್ವರ ಹಾಗೂ ಕೊಳಲಿನಲ್ಲಿ ವಿದ್ವಾನ್ ರಾಹುಲ್ ಕಣ್ಣೂರು ಜತೆಗೂಡಿ ಕಾರ್ಯಕ್ರಮಕ್ಕೆ ಮೆರಗನ್ನಿತ್ತರು.

Post a Comment

0 Comments