Ticker

6/recent/ticker-posts

Ad Code

ಶಾಂತಿಗುರಿಯಲ್ಲಿ ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ಶಾಂತಿಗೊಂದು ಗುರಿ ಸಾಕ್ಷತ್ಕಾರವಾಗಿದೆ - ಒಡಿಯೂರು ಶ್ರೀ

 


ಉಪ್ಪಳ : "ಪ್ರತಿಯೊಬ್ಬರು ಜೀವನದಲ್ಲಾಗಲಿ, ದೇಶದಲ್ಲಾಗಲಿ ಸದಾ ಸರ್ವತ್ರ ಬಯಸುವುದು ಶಾಂತಿಯನ್ನು. ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ಶಾಂತಿಗುರಿ ಅಕ್ಷರಶಃ ಶಾಂತಿಗೊಂದು ಗುರಿ ಇರಿಸಿ ಸಾಕ್ಷತ್ಕಾರವಾಗಿರುವುದು ಭಕ್ತ ಜನತೆಯ ಪುಣ್ಯ ಕಾರ್ಯ" ಎಂದು ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು. 


ಅವರು ಬೇಕೂರು ಸಮೀಪದ ಶಾಂತಿಗುರಿ ಶ್ರೀ ಮೂಕಾಂಬಿಕಾ ದೇವಸ್ಥಾನ  ಶ್ರೀ ಮೂಕಾಂಬಿಕಾ ದೇವಿಯ ಪೀಠಪ್ರತಿಷ್ಠೆ,ಪರಿವಾರ ಸಾನಿಧ್ಯಗಳ ಪ್ರತಿಷ್ಠೆ ಮತ್ತು  ಬ್ರಹ್ಮಕಲಶಾಭಿಷೇಕದ ಅಂಗವಾಗಿ ದ್ವಿತೀಯ ದಿನವಾದ ರವಿವಾರ ನಡೆದ  ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಉದ್ಯಮಿ ಸಂಜೀವ ಶೆಟ್ಟಿ ತಿಂಬರ ಅಧ್ಯಕ್ಷತೆವಹಿಸಿದ್ದರು.ಧಾರ್ಮಿಕ ಮುಂದಾಳು ಕುಂಟಾರು ರವೀಶ ತಂತ್ರಿ,ಮಂಗಲ್ಪಾಡಿ ಮನೆ ಯಜಮಾನ ಡಾ.ಕೌಶಿಕ್ ಶೆಟ್ಟಿ, ಆರ್ ಎಸ್ ಎಸ್ ಕಣ್ಣೂರು ವಿಭಾಗ ಕಾರ್ಯವಾಹಕ್ ಲೋಕೇಶ್ ಜೋಡುಕಲ್ಲು,ಉದ್ಯಮಿ ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಮಂಗಲ್ಪಾಡಿ ಗ್ರಾ.ಪಂ.ಸದಸ್ಯೆ ಸುಜಾತ ಶೆಟ್ಟಿ, ಐಲ ಕ್ಷೇತ್ರ ಮೊಕ್ತೇಸರ ಸುಕುಮಾರ್ ಉಪ್ಪಳ,ಅಂಬಾರು ಕ್ಷೇತ್ರ ಮೊಕ್ತೇಸರ ಎಚ್ ಕೆ ಶೆಟ್ಟಿ, ಕುಬಣೂರು ಕ್ಷೇತ್ರ ಗೌರವಾಧ್ಯಕ್ಷ ಆಶೋಕ್ ಕುಮಾರ್ ಹೊಳ್ಳ, ಉದ್ಯಮಿ ಸೀತಾರಾಮ ಶೆಟ್ಟಿ ತಿಂಬರ, ಪ್ರತಾಪನಗರ ಶ್ರೀಗಾಯತ್ರಿ ವಿಶ್ವಕರ್ಮ ಭಜನಾ ಮಂದಿರದ ಅಧ್ಯಕ್ಷ ಶಿವಾನಂದ ಆಚಾರ್ಯ,ಯಕ್ಷಗುರು ರಾಮ ಸಾಲಿಯಾನ್, ಶಿಕ್ಷಕ,ಕವಿ ಹರೀಶ್ ಸುಲಾಯ ಒಡ್ಡಂಬೆಟ್ಟು ಗುತ್ತು ಸಭೆಯಲ್ಲಿ ಉಪಸ್ಥಿತರಿದ್ದರು.ಉಷಾ ಉದಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಮಿತಾ ಆರ್ ಆಳ್ವ ಪ್ರಾರ್ಥನೆ ಹಾಡಿದರು. ಬ್ರಹ್ಮಕಲಶೋತ್ಸವ ಪ್ರಧಾನ‌ ಸಂಚಾಲಕ ಯಾದವ ಕೀರ್ತೇಶ್ವರ ಸ್ವಾಗತಿಸಿ ಮಾತೃ ಸಮಿತಿ ಪ್ರಧಾನ‌ ಕಾರ್ಯದರ್ಶಿ ಅನ್ನಪೂರ್ಣ ರೈ  ವಂದಿಸಿದರು
.ಕಮಲಾಕ್ಷ ಐಲ ನಿರೂಪಿಸಿದರು.

ಪೋಟೊಸ್ : ಬ್ರೈಟ್ ಸ್ಟುಡಿಯೋ ಉಪ್ಪಳ

Post a Comment

0 Comments