Ticker

6/recent/ticker-posts

ಕಿಸಾನ್ ಸೇನೆ ಜಿಲ್ಲಾ ಸಮ್ಮೇಳನದಲ್ಲಿ ಹಲವು ಬೇಡಿಕೆಗಳ‌ ಮಂಡನೆ, ಸಾಲಗಳಿಗೆ ಬಡ್ಡಿ ರಹಿತ‌ ಮೊರೊಟೋರಿಯಂ ಘೋಷಿಸಲು ಆಗ್ರಹ


 ಬದಿಯಡ್ಕ: ವಿವಿದ ಬೇಡಿಕೆಗಳನ್ನು ಮುಂದಿಟ್ಟುಕೊಂಡು  ನಡೆದ ಜಿಲ್ಲಾ ಕಿಸಾನ್ ಸೇನಾ ಸಮ್ಮೇಳನವನ್ನು ಬದಿಯಡ್ಕದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಗೋವಿಂದ ಭಟ್ ಕೊಟ್ಟಂಗುಳಿ ಅಧ್ಯಕ್ಷತೆ ವಹಿಸಿದರು. ಹವಾಮಾನ ವೈಪರೀತ್ಯ ಕಾರಣದಿಂದಾಗಿ ಅಡಿಕೆ ಮರಗಳಗೆ ಹಳದಿ ರೋಗ ಸಹಿತ ವಿವಿದ ರೋಗಗಳು ಭಾಧಿಸುತ್ತಿದ್ದು ಇದಕ್ಕೆ ಪಂಚಾಯತು ಸ್ವಂತ ನಿಧಿ ಬಳಸಿ ಸಿಂಪಡಣೆ ನಡೆಸಬೇಕು, ಮೂರು ವರ್ಷಗಳ ವರೆಗೆ ಬಡ್ಡಿ ರಹಿತ ಮೊರೊಟೋರಿಯಂ ಘೋಷಿಸಬೇಕು, ಬೆಳೆ ನಾಶಕ್ಕೆ ನಷ್ಟ ಪರಿಹಾರ ಒದಗಿಸಬೇಕು, ಜಿಲ್ಲೆಗೆ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ‌ಮಂಡಿಸಲಾಯಿತು. ಸಿಜಿ ಮಾಥ್ಯು, ಅಶ್ವಿನಿ ಎಂ.ಎಲ್, ಚಂದ್ರಶೇಖರ ರಾವ್ ಕಲ್ಲಗ,  ಶ್ಯಾಂ ಪ್ರಸಾದ್‌ಮಾನ್ಯ,  ರಾಘವೇಂದ್ರ ಪಿ, (ಜಿಲ್ಲಾ ಕೃಷಿ ಅಧಿಕಾರಿ), ಜ್ಯೋತಿ ಕುಮಾರಿ(ಡೆಪ್ಯುಟಿ ಡಯರಕ್ಟರ್),  ಮಾಹಿನ್ ಕೇಳೋಟ್, ಎಂ.ಕೃಷ್ಣನ್, ಡಾ.ಚೈತ್ರ ಎಂ(ಸಿ.ಪಿ.ಸಿ.ಆರ್.ಐ), ಡಾ.ಡಾಲಿಯ ಮೋಳ್, ಅಜಿತ್ ಕುಮಾರ್, ಸತ್ಯನಾರಾಯಣ ಬೆಳೇರಿ ಸಹಿತ ಹಲವರು ಭಾಗವಹಿಸಿದರು. ಸಚಿನ್ ಕುಮಾರ್ ಮಾಟಡ್ಕ ವಂದಿಸಿದರು

Post a Comment

0 Comments