Ticker

6/recent/ticker-posts

Ad Code

ಯುವ ಜನಾಂಗದ ಕೊರಳಿಗೆ ಉರುಳಾಗುತ್ತಿರುವ ಬೆಟ್ಟಿಂಗ್ ! ಊರು ತೊರೆಯಬೇಕಾದ ಸಂಕಷ್ಟ


ಕಾಸರಗೋಡು : ಐಪಿಎಲ್ ಸಹಿತ ಆನ್ಲೈನ್ ಬೆಟ್ಟಿಂಗ್ ದಂಧೆಯಿಂದ ಇಮ್ಮಡಿ ಹಣ ಗಳಿಸುವ ದುರಾಸೆಗೆ ಬಿದ್ದ ಯುವ ಜನತೆ ಸಾವಿರಾರು ರೂ ಕಳೆದುಕೊಂಡು ಊರು ತೊರೆಯಬೇಕಾದ ಅಥವ ನೇಣಿಗೆ ಕೊರಳೊಡ್ಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ಸುಸಂಸ್ಕೃತ ಸಮಾಜ ಆತಂಕವನ್ನೆದುರಿಸುತ್ತದೆ. ಕೆಲವರು ಉದ್ಯಮಕ್ಕಾಗಿ ತೊಡಗಿಸಿಕೊಂಡ ಹಣವನ್ನೊ,ಹೆಂಡತಿ‌‌‌ ಮಕ್ಕಳ ಚಿನ್ನಾಭರವನ್ನೊ ಅಡವಿಟ್ಟು ಬೆಟ್ಟಿಂಗ್ ನಲ್ಲಿ ತೊಡಗಿ ಸಾವಿರಾರು ರೂಗಳನ್ನು ಕಳೆದುಕೊಂಡ ಬಗ್ಗೆ  ಕೇಳಿ ಬರುತ್ತಿದೆ. ಆನ್ಲೈನ್ ಆಪ್ ಮಾಡಿಕೊಂಡು  ದಲ್ಲಾಳಿಯ ಸ್ಥಾನದಲ್ಲಿ ಸಹಸ್ರಾರು ರೂ ಗಳಿಸಿದವರ ಬಗ್ಗೆಯೂ ವರದಿಯಾಗಿದೆ. ಒಟ್ಟಾರೆಯಾಗಿ ಗಡಿ ಪ್ರದೇಶಗಳಾದ ಪೆರ್ಲ ಬದಿಯಡ್ಕ ಸಹಿತ ಮಂಜೇಶ್ವರ ಕಾಸರಗೋಡು ತಾಲೂಕುಗಳಲ್ಲಿ ಇದೀಗ ಅತ್ಯಧಿಕ ಜನ ಬೆಟ್ಟಿಂಗ್ ದಂಧೆಗೆ ಬಲಿಯಾಗುತ್ತಿರುವುದಾಗಿ ಪೋಲಿಸರು ತಿಳಿಸುತ್ತಿದ್ದಾರೆ.

Post a Comment

0 Comments