Ticker

6/recent/ticker-posts

Ad Code

ಪತಿಯ ಚಿಕಿತ್ಸೆಗೆಂದು‌ ಮನೆಯಲ್ಲಿಟ್ಟಿದ್ದ ಹಣ ಕಳವು, ಪೊಲೀಸರಿಗೆ ದೂರು


 ಮುಳ್ಳೇರಿಯ: ಪತಿಯ ಚಿಕಿತ್ಸೆಗೆಂದು‌ ಮನೆಯಲ್ಲಿಟ್ಟಿದ್ದ ಹಣವನ್ನು ಕಳವುಗೈದಿರುವುದಾಗಿ ದೂರುಂಟಾಗಿದೆ. ಬೋವಿಕಾನ ತೇಜಸ್ ಕಾಲನಿಯಲ್ಲಿ  ಕಿರಣ್‌ಕುಮಾರ್ ಎಂಬವರು ವಾಸಿಸುವ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ. ಕಿರಣ್ ಕುಮಾರ್ ಅಸೌಖ್ಯದ ಹಿನ್ನೆಲೆಯಲ್ಲಿ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ಇವರ ಪತ್ನಿ ಶ್ರೀವಿದ್ಯ ಸಹ ಆಸ್ಪತ್ರೆಯಲ್ಲಿದ್ದು ಮಗಳು‌ ಸಂಬಂಧಿಕರ‌ ಮನೆಯಲ್ಲಿದ್ದಾಳೆ. ನೆರೆಮನೆಯ ಓರ್ವರು ತಿಳಿಸಿದಂತೆ ನಿನ್ನೆ (ಬುದವಾರ) ಬಂದು ನೋಡಿದಾಗ ಮನೆಯ ಕಪಾಟಿನಲ್ಲಿ ಚಿಕಿತ್ಸೆಯ ಖರ್ಚಿಗಾಗಿ ಇರಿಸಿದ್ದ 25 ಸಾವಿರ ರೂ ನಾಪತ್ತೆಯಾಗಿರುವುದು ತಿಳಿದು ಬಂತು. ಚಿನ್ನದ ಕಿವಿಯೋಲೆ ಸಹಿತ ಕಳವುಗೈಯ್ಯಲಾಗಿದೆ. ಈ ಬಗ್ಗೆ ಶ್ರೀವಿದ್ಯ ಆದೂರು‌ ಪೊಲೀಸರಿಗೆ ದೂರು ನೀಡಿದ್ದಾರೆ.

Post a Comment

0 Comments