Ticker

6/recent/ticker-posts

Ad Code

ಮಾತೃಗಿರಿ ಎಲಿಯಾಣ ದೇರಂಬಳ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ವಾರ್ಷಿಕೋತ್ಸವ


 ಮೀಯಪದವು: ಮಾತೃಗಿರಿ ಎಲಿಯಾಣ ದೇರಂಬಳ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ವಾರ್ಷಿಕೋತ್ಸವವು ವಿವಿದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಿತು. ಸೂರ್ಯೋದಯದಿಂದ ಸೂರ್ಯಾಸ್ತದ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಶ್ರೀ ರವಿರಾಜ ಬರ್ಲಾಯರ ನೇತೃತ್ವದಲ್ಲಿ ಪ್ರಾತಃಕಾಲ ಗಣಪತಿ ಹವನ, ಹೂವಿನ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಕೊಂಡೆವೂರು ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ರವರು ಮಂದಿರಕ್ಕೆ ಭೇಟಿ ನೀಡಿ ಅವರಣ ಚಪ್ಪರವನ್ನು ದೀಪ ಬೆಳಗಿಸುವುದರ ಮೂಲಕ ಲೋಕರ್ಪಣೆಗೈದು ಭಕ್ತರಿಗೆ ಆಶೀರ್ವಾದ ಮಂತ್ರಾಕ್ಷತೆಯನ್ನು ನೀಡಿದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹರಿದಾಸ ಶೇಣಿ ಮುರಳಿ ಇವರಿಂದ ಶರಸೇತು ಬಂಧನ ಹರಿಕಥೆ ನಡೆಯಿತು. ನಂತರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷ ಸ್ಥಾನವನ್ನು ಶರತ್ ಕೇಶವ ತೊಟ್ಟಿತ್ತೋಡಿ ರವರು ವಹಿಸಿಕೊಂಡರು. ಮುಖ್ಯ ಅತಿಥಿಗಳಾದ ಶ್ರೀ ಗಂಗಾಧರ ಕೊಂಡೆವೂರು ರವರು ಧಾರ್ಮಿಕ ವಿಚಾರವನ್ನು ತಿಳಿಸಿದರು. 



ಈ ಸಂದರ್ಭದಲ್ಲಿ ತಮ್ಮ ವೃತ್ತಿಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಡಾ. ಎಸ್ ಎನ್ ಭಟ್ ಮೀಯಪದವು ಹಾಗೂ ಪದ್ಮನಾಭ ಚಿಗುರುವಾದೆ ಇವರನ್ನು ಮಂದಿರದ ವತಿಯಿಂದ ಗೌರವಿಸಲಾಯಿತು.

ಈ ಸಭಾ ಕಾರ್ಯಕ್ರಮದಲ್ಲಿ ಮಂದಿರ ನಿರ್ಮಾಣಕ್ಕೆ ಭೂಮಿಯನ್ನು ದಾನ ನೀಡಿದ ದಿ। ಪ್ರೇಮಾ ಕೆ ಭಟ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶ್ರೀ ಕೆ.ವಿ ಭಟ್ ಮೀಯಪದವು, ಶ್ರೀಮತಿ ಸರಸ್ವತಿ ಎಲಿಯಾಣ, ಚಂದ್ರಹಾಸ ಶೆಟ್ಟಿ ದೇರಂಬಳ ಸಭೆಯಲ್ಲಿ ಉಪಸ್ಥಿತರಿದ್ದರು.ಸತೀಶ್ಚಂದ್ರ ರೈ ಸ್ವಾಗತಿಸಿ, ಶ್ರೀಮತಿ ಪವಿತ್ರ ಕೆ ಜಿ ವಂದಿಸಿದರು. ಲಕ್ಷ್ಮೀಶ ಬೊಳುಂಬು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಸ್ಥಳೀಯ ಪ್ರತಿಭೆಗಳಿಂದ ನೃತ್ಯಂಜಲಿ ಕಾರ್ಯಕ್ರಮ ನಡೆಯಿತು.

Post a Comment

0 Comments