Ticker

6/recent/ticker-posts

ವಾಟ್ಸಾಪ್ ಮೂಲಕ ಗೆಳೆತನ ಸಾಧಿಸಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿದ ಪ್ರಕರಣ; 19 ವರ್ಷ ಪ್ರಾಯದ ಆರೋಪಿಯ ಸೆರೆ


 ವಾಟ್ಸಾಪ್ ಮೂಲಕ ಪರಿಚಿತಳಾದ 17 ವರ್ಷದ ಬಾಲಕಿಗೆ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ  19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪೇರುಮೇಡು  ಕೋಡಿಯಕುಳಂಗರ ನಿವಾಸಿ ಅಭಿರಾಂ(19) ಬಂಧಿತ ಆರೋಪಿ. ಬಾಲಕಿ 10 ನೇ ತರಗತಿಯಲ್ಲಿ ಓದುತ್ತಿದ್ದಾಗ ಅಭಿರಾಂ ಆಕೆಯ ಜತೆ ವಾಟ್ಸಾಪ್ ಮೂಲಕ ಸಂಪರ್ಕದಲ್ಲಿದ್ದನೆನ್ನಲಾಗಿದೆ. ಅಭಿರಾಂ ಪೆಟ್ರೋಲ್ ಪಂಪಿನಲ್ಲಿ ನೌಕರನಾಗಿದ್ದು ಈ ವೇಳೆ ಬಾಲಕಿಯನ್ನು  ಕಾಮಗಾರಿ ಪೂರ್ತಿಯಾಗದ ತನ್ನ‌ ಮನೆಗೆ  ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅನಂತರ ಗರ್ಭಿಣಿಯಾದ ಬಾಲಕಿಯನ್ನು ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಲಾಯಿತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದರು

Post a Comment

0 Comments