Ticker

6/recent/ticker-posts

Ad Code

ರಾಜ್ಯದಲ್ಲಿ 2 ಸಾವಿರ ದಾಟಿದ ಕೋವಿಡ್ ರೋಗಿಗಳು, ವಿವಿದೆಡೆ ಮತ್ತೆ ಕಾಣಿಸಿಕೊಂಡ ಮಾಸ್ಕ್


 ತಿರುವನಂತಪುರಂ: ಕೇರಳದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 2 ಸಾವಿರ ದಾಟಿದೆ. ಕಳೆದ 24 ಗಂಟೆಗಳಲ್ಲಿ 127 ಮಂದಿಗೆ ಕೋವಿಡ್ ಪೊಸೆಟಿವ್ ಕಾಣಿಸಿಕೊಂಡಿದ್ದು ರೋಗಿಗಳ ಸಂಖ್ಯೆ 2 ಸಾವಿರ ದಾಟಿದೆಯೆಂದು ಆರೋಗ್ಯ ಇಲಾಖೆ ತಿಳಿಸಿದೆ.  ಇದೇ ವೇಳೆ ದೇಶದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ 5755 ಆಗಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ ತಗುಲಿ 4 ಮಂದಿ ಮೃತಪಟ್ಟಿದ್ದಾರೆ. 

   ಕೋವಿಡ್ ಹರಡುವಿಕೆಗೆ ವೇಗ ಮೂಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಾಣಿಸಿಕೊಂಡಿದೆ. ತಿರುವನಂತಪುರಂ, ಎರ್ನಾಕುಲಂ, ಕೋಜಿಕ್ಕೋಡ್ ಸಹಿತ ಜನನಿಬಿಡ ನಗರಗಳಲ್ಲಿ ಬಹುತೇಕ ಜನರು ಮಾಸ್ಕ್ ಧರಿಸಲಾರಂಭಿಸಿದ್ದಾರೆ. ವಿವಿದ ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.  ಆಯ್ದ ಶಿಕ್ಷಣ ಕೇಂದ್ರಗಳಲ್ಲೂ ಮಾಸ್ಕ್ ಕಡ್ಡಾಯ ಮಾಡಲಾಗುತ್ತಿದೆ. ಮಳೆ ಹೆಚ್ಚಾದಲ್ಲಿ ಕೋವಿಡ್ ರೋಗ ಇನ್ನಷ್ಟು ಕಡೆಗೆ ಹರಡುವ ಸಾಧ್ಯತೆ ಇದೆಯೆನ್ನಲಾಗಿದೆ

Post a Comment

0 Comments