Ticker

6/recent/ticker-posts

Ad Code

ಮಾವಿನಕಟ್ಟೆ ಶ್ರೀ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಹೊಸ ತರಗತಿಯ ಉದ್ಘಾಟನೆ


ಬದಿಯಡ್ಕ: ಮಾವಿನಕಟ್ಟೆ  ಶ್ರೀ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ.) ಕರ್ನಾಟಕ ಇದರ ಹೊಸ ತರಗತಿಯ ಉದ್ಘಾಟನಾ ಸಮಾರಂಭ ಇಲ್ಲಿನ  ತ್ರಿವೇಣಿ ಸಭಾ ಭವನದಲ್ಲಿ ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ  ಮಾವಿನಕಟ್ಟೆ ಇವರು ವಹಿಸಿ ಕೊಂಡರು. ಮುಖ್ಯ ಅತಿಥಿಗಳಾಗಿ  ಪ್ರಕಾಶ  ಕುಂಟಾರು ಇವರು ಭಾಗವಹಿಸಿದರು. ಕಾಸರಗೋಡು ನಗರ ಶಾಖಾ ವಿಸ್ತರಣಾ ಪ್ರಮುಖರಾದ ಶ್ರೀಯುತ ಕುಮಾರ ಸುಬ್ರಹ್ಮಣ್ಯ  ಇವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕುಮಾರಿ ದೀಪಿಕಾ  ಕಾರ್ಯಕ್ರಮ ನಿರೂಪಣೆ ಸ್ವಾಗತ ಮಾಡಿದರು. ಜಯಪ್ರಕಾಶ್  ಇವರು ವಂದನಾರ್ಪಣೆ ಮಾಡಿದರು. ಯೋಗಬಂಧುಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

Post a Comment

0 Comments