ಬದಿಯಡ್ಕ: ವಿಶ್ವ ಹಿಂದು ಪರಿಷತ್ ಬದಿಯಡ್ಕ ಪಂಚಾಯತ್ ಸಮಿತಿ ಸಭೆಯು ಸಂಸ್ಕೃತಿ ಭವನದಲ್ಲಿ ನೆರವೇರಿತು. ವಿಹಿಂಪ ಪಂಚಾಯತ್ ಸಮಿತಿ ಅಧ್ಯಕ್ಷ ನಾರಾಯಣ ಪಿ ಪೆರಡಾಲ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯರಾದ ಸಂಕಪ್ಪ ಭಂಡಾರಿ ಬಾಡೂರು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್ ರೈ ಪುತ್ರಕಳ ವಿಷಯ ಮಂಡನೆ ಮಾಡಿದರು, ಬದಿಯಡ್ಕ ಪ್ರಖಂಡ ಅಧ್ಯಕ್ಷ ಸುನೀಲ್ ಕಿನ್ನಿಮಾಣಿ, ಮಾತೃ ಶಕ್ತಿ ಅಧ್ಯಕ್ಷೆ ರೇಷ್ಮಾ, ಭಜರಂಗದಳ ಸಂಚಾಲಕ ರಂಜಿತ್ ರೈ ವಳಮಳೆ, ಸಹ ಸಂಚಾಲಕ ರಾಜೇಶ್ ಆಳ್ವ ಕಡಾರು ಉಪಸ್ಥಿತರಿದ್ದರು. ಜತೆಗೆ ಜೂನ್ 15 ರಂದು ಗಣೇಶ್ ಮಂದಿರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ ದ ಆಹ್ವಾನ ಪತ್ರಿಕೆಯ ಬಿಡುಗಡೆಯು ನಡೆಯಿತು. ಉಪಾಧ್ಯಕ್ಷ ರವಿವರ್ಮ ಸ್ವಾಗತಿಸಿ ಕಾರ್ಯದರ್ಶಿ ರಾಕೇಶ್ ರೈ ವಂದಿಸಿದರು.


0 Comments