Ticker

6/recent/ticker-posts

Ad Code

ಅಡ್ಯನಡ್ಕದಲ್ಲಿ ತಂಬಾಕು ವಿರೋಧಿ ದಿನಾಚರಣೆ


ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ  ಸಿ ಟ್ರಸ್ಟ್  ವಿಟ್ಲ  ಕೇಪು ವಲಯ ಹಾಗೂ ಜನತಾ ಪ್ರೌಢ ಶಾಲೆ ಪದವಿ ಪೂರ್ವ ಕಾಲೇಜು ಅಡ್ಯನಡ್ಕದ ಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವಿಟ್ಲ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ತಂಬಾಕು ವಿರೋಧಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು 

ಕಾರ್ಯಕ್ರಮದಲ್ಲಿ ಕೇಪು ವಲಯದ ಮೇಲ್ವಿಚಾರಕರಾದ ಚಂದ್ರಶೇಖರ ಪ್ರಾಸ್ತಾವಿಕ ವಾಗಿ ಮಾತಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ರೇಣುಕ ಕಾಣಿಯೂರು ಅವರು ತಂಬಾಕು ಹಾಗೂ ಇತರ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು,ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ಅಡ್ಯನಡ್ಕ ಒಕ್ಕೂಟದ ಅಧ್ಯಕ್ಷರಾದ ಪುಷ್ಪಾಕರ ರೈ ವಹಿಸಿ ಶುಭ ಹಾರೈಸಿದರು ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್, ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಟಿ ಆರ್ ನಾಯಕ್, ಉಪನ್ಯಾಸಕ ವೃಂದ, ಅಧ್ಯಾಪಕ ವೃಂದ, ವಿದ್ಯಾರ್ಥಿ ವೃಂದ ಹಾಗೂ ಶೌರ್ಯ ತಂಡದ ಮೀನಾಕ್ಷಿ ಮಹಾಲಿಂಗ ಪಾಟಳಿ .ಕೆ  ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಗಾಯತ್ರಿ ಎಸ್ ಸ್ವಾಗತಿಸಿ ರಾಜಗೋಪಾಲ್ ಜೋಶಿ ವಂದಿಸಿ ಶಿವಕುಮಾರ್ ಸಾಯ ಕಾರ್ಯಕ್ರಮ ನಿರೂಪಿಸಿದರು
.

Post a Comment

0 Comments