Ticker

6/recent/ticker-posts

Ad Code

ಮಂಗಳೂರು- ಕಾಸರಗೋಡು ಸಾರಿಗೆ ಬಸ್ಸಿನಲ್ಲಿ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ವಶ


 ಮಂಜೇಶ್ವರ:  ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಸಾಗುತ್ತಿದ್ದ ಕರ್ಣಾಟಕ ರಾಜ್ಯ ಸಾರಿಗೆ ಬಸ್ಸಿನಲ್ಲಿ ವಾರಸುದಾರರಿಲ್ಲದ 3.375 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯವನ್ನು ಅಬಕಾರಿ ಕೆಮು ತಂಡ ವಶಪಡಿಸಿಕೊಂಡಿದೆ. ಎಕ್ಸ್ಪ್ರೆಸ್ ಸರ್ಕಲ್ ಇನ್ಸ್ಪೆಕ್ಟರ್ ಪ್ತಸನ್ನನ್ ಜಿ ಹಾಗೂ ತಂಡದ ನೇತೃತ್ವದಲ್ಲಿ  ವಾಹನ ತಪಾಸಣೆ ನಡೆಸಿದಾಗ ಮದ್ಯ ವಶಪಡಿಸಲಾಗಿದೆ. ಪ್ರಿವೆಂಟಿವ್ ಆಫೀಸರ್ ಮೊಯ್ದೀನ್ ಸಾದಿಕ್, ಇತರರಾದ ಪ್ರಶಾಂತ್ ಕುಮಾರ್, ರಾಹುಲ್.ಟಿ,  ಕೆಮು ಪ್ರಿವೆಂಟಿವ್ ಆಫೀಸರ್ ಮಂಜುನಾಥ ಆಳ್ವ, ಸಿಇಒ ಅಧಿಕಾರಿಗಳಾದ ಸುಬಿನ್ ಫಿಲಿಫ್, ಸನಲ್ ಕುಮಾರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಎಕ್ಸ್ಪ್ರೆಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಿರುವ ವೇಳೆ ಮದ್ಯ ಸಾಗಿಸಿದ ವ್ಯಕ್ತಿ ಅಮಾಯಕನಂತೆ ಕುಳಿತಿದ್ದನೆನ್ನಲಾಗಿದೆ.

Post a Comment

0 Comments