Ticker

6/recent/ticker-posts

ಪೆರ್ಲದಲ್ಲಿ ಮಹಿಳೆಯರಿಗೆ ಉಚಿತ ಯೋಗ ಶಿಬಿರ


ಪೆರ್ಲ: ಉಕ್ಕಿನಡ್ಕಾಸ್ ಆಯುರ್ವೇದದ ಪ್ರಾಯೋಜಕತ್ವದಲ್ಲಿ ಹಾಗೂ ಶ್ರೀಮಾತಾ ಯೋಗ ಕೇಂದ್ರದ ಸಹಭಾಗಿತ್ವದಲ್ಲಿ, ಪೆರ್ಲದ ಶಂಕರ್ ಸದನದಲ್ಲಿ ಮಹಿಳೆಯರಿಗಾಗಿ ಒಂದು ವಾರದ ಉಚಿತ ಯೋಗ ಶಿಬಿರ ಆಯೋಜಿಸಲಾಗಿದ್ದು, ಜೂನ್ 14ರಿಂದ 20ರವರೆಗೆ ಪ್ರತಿದಿನ ಸಂಜೆ 4.30 ರಿಂದ 6 ಗಂಟೆಯವರೆಗೆ ನಡೆಯಲಿದೆ. ಶಿಬಿರವು ಆಯುರ್ವೇದ ತಜ್ಞೆ ಡಾ. ಸಪ್ನ ಜೆ. ಉಕ್ಕಿನಡ್ಕ ಹಾಗೂ ಯೋಗ ತಜ್ಞೆ ದಿವ್ಯ ಶರ್ಮ ಪಳ್ಳತ್ತಡ್ಕ ಅವರ ನೇತೃತ್ವದಲ್ಲಿ ನಡೆಯಲಿದೆ. "ಜೀವನಶೈಲಿ ಸಂಬಂಧಿತ ರೋಗಗಳನ್ನು ತಡೆಗಟ್ಟಲು ಯೋಗ" ಎಂಬ ವಿಷಯದ ಅಡಿಯಲ್ಲಿ ಪ್ರತಿ ದಿನ ಒಂದೊಂದು ಆರೋಗ್ಯ ಸಮಸ್ಯೆಯ ಕುರಿತು ಚರ್ಚಿಸಿ, ಅದರ ತಡೆಗೆ ಅಗತ್ಯವಿರುವ ಯೋಗಾಸನಗಳು, ಪ್ರಾಣಾಯಾಮ ಹಾಗೂ ಆಹಾರ ಸಲಹೆಗಳನ್ನು ನೀಡಲಾಗುತ್ತದೆ. ಈ ಶಿಬಿರದ ಮುಖ್ಯ ಉದ್ದೇಶ ಆರೋಗ್ಯಕರ ಜೀವನಶೈಲಿಗೆ ಪ್ರೇರೇಪಿಸುವುದಾಗಿದೆ ಎಂದು ಡಾ. ಸಪ್ನ ಜೆ. ಉಕ್ಕಿನಡ್ಕ ಅವರು ತಿಳಿಸಿದ್ದಾರೆ. ಆಸಕ್ತ ಮಹಿಳೆಯರು ಕೊಟ್ಟಿರುವ ದೂರವಾಣಿ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ. 9645443993

Post a Comment

0 Comments