ಪೆರ್ಲ : ಕೇರಳ ಸರಕಾರ ಪರಿಶಿಷ್ಠ ವರ್ಗ ಅಭಿವೃಧ್ಧಿ ಇಲಾಖೆ ಆರಂಭಗೊಂಡು 50 ವರ್ಷ ಪೂರ್ತಿಗೊಳಿಸಿ ಸುವರ್ಣ ಮಹೋತ್ಸವದ ಸಂದರ್ಭ ಎಲ್ಲಾ ಉನ್ನತಿ ಗಳಲ್ಲೂ ಊರು ಉತ್ಸವ ಕಾರ್ಯಕ್ರಮ ಆಯೋಜಿಸಿದ ಭಾಗವಾಗಿ ಎಣ್ಮಕಜೆ ಉನ್ನತಿಯ ಉತ್ಸವವನ್ನು ಬಲ್ಲುಬಾಲಕೃಷ್ಣ ರವರ ಅಧ್ಯಕ್ಷತೆಯಲ್ಲಿ ಊರು ಮೂಪ ಬೋಗ್ರಭಾಸ್ಕರ ರವರು ದೀಪ ಬೆಳಗಿಸಿ ಉದ್ಘಾಟಿಸಿದರು
ಮುಖ್ಯ ಅತಿಥಿಯಾಗಿ ರಂಗಭೂಮಿ ನಿರ್ದೇಶಕ ಶಿಕ್ಷಕ ಉದಯ ಸಾರಂಗ್ ಪೆರ್ಲ ಇವರು ಪರಿಶಿಷ್ಟ ವರ್ಗ ಇಲಾಖೆ ಮೂಲಕ ಈ ಸಮುದಾಯ ಸಾಗಿ ಬಂದ ವಿಕಸಿತ ಹಾದಿಯ ಬಗ್ಗೆ ತಿಳಿಸುತ್ತಾ ಸರಕಾರದ ಯೋಜನೆಗಳು ತಳಮಟ್ಟದಲ್ಲಿ ಪ್ರತಿ ಫಲಾನುಭವಿಗಳಿಗೆ ಸಿಗುವುದಾದರೆ ದಲಿತರು ಬಲಿತರಾಗುತ್ತಾರೆ. ಮೂಲ ಸಂಸ್ಕೃತಿಯ ಕೊನೆಯ ಕೊಂಡಿಯಾಗಿ ಇಂದಿಗೂ ಆಚಾರ ವಿಚಾರಗಳು ಕೊರಗ ಜನಾಂಗ ಪೋಷಿಸುತ್ತಿದೆ. ತುಳುನಾಡಿನ ಸಂಸ್ಕೃತಿಯ ಪ್ರತಿಬಿಂಬವಾಗಿ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಉನ್ನತ ವಿದ್ಯಾಭ್ಯಾಸ ಪಡೆದು ಸಾಧಿಸಲು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು ಎಂದು ಮಾತಾನಾಡಿದರು.ಕಾರ್ಯಕ್ರಮದಲ್ಲಿ ವಿದ್ಯಾರಂಗದ ಉನ್ನತ ಸಾಧಕರಿಗೆ ಹಾಗೂ ಹಿರಿಯರಿಗೆ ಗೌರವಾರ್ಪಣೆ ನಡೆಸಲಾಯಿತು. ಗೋತ್ರಕಲಾ ಪ್ರದರ್ಶನದ ಭಾಗವಾಗಿ ಮತ್ತಡಿ ಹಾಗೂ ಬಳಗದವರಿಂದ ಡೋಲು ಕೊಳಲು ವಾದನದೊಂದಿಗೆ ಡೋಲು ನಲಿಕೆ ಎಲ್ಲರನ್ನು ಮನರಂಜಿಸಿತ್ತು. ಎಸ್. ಟಿ ಪ್ರೊಮೊಟರ್ ಅಶೋಕ ಸ್ವಾಗತಿಸಿ. ಓವರ್ಸೀಯರ್ ಕೃಷಾಂತ್ ವಂದಿಸಿದರು.
0 Comments