Ticker

6/recent/ticker-posts

ಹತ್ತು ತಿಂಗಳ ಹಿಂದೆ‌ ನಾಪತ್ತೆಯಾಗಿ‌ ಮರಳಿದ್ದ ಯುವತಿ ಪುನಃ ನಾಪತ್ತೆ; ಪತಿಯಿಂದ ದೂರು


 ಬದಿಯಡ್ಕ: ಮೂರು ಮಕ್ಕಳ ತಾಯಿ ನಾಪತ್ತೆಯಾದ ಘಟನೆ ನಡೆದಿದೆ. ಬದಿಯಡ್ಕ ಬಳಿಯ ಅರ್ತಿಪಳ್ಳ ನಿವಾಸಿ ವಿಜಯಶ್ರೀ(33) ನಾಪತ್ತೆಯಾದ ಯುವತಿ. ನಿನ್ನೆ (ಸೋಮವಾರ) ಬೆಳಗ್ಗೆ  ಈಕೆ ಮನೆಯಿಂದ ಹೊರಟಿದ್ದು ಮರಳಿಲ್ಲ. ತಾನು ಇನ್ನು ಹಿಂತಿರುಗುವುದಿಲ್ಲ ಎಂದು ಬರೆದಿರುವ ಕಾಗದ ಮನೆಯಲ್ಲಿ ಲಭಿಸಿದೆ. ಈ ಬಗ್ಗೆ ಪತಿ ಸತೀಶ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ಧಾರೆ. 10 ತಿಂಗಳ ಹಿಂದೆಯಷ್ಟೆ ಈಕೆ ನಾಪತ್ತೆಯಾಗಿದ್ದು ಮರಳಿ ತರಲಾಗಿತ್ತು

Post a Comment

0 Comments