Ticker

6/recent/ticker-posts

ನಾಯಿ ಅಡ್ಡ ಬಂದು ಆಟೋ ರಿಕ್ಷಾ ಮಗುಚಿ ಚಾಲಕ ಮೃತ್ಯು


ಪೆರ್ಲ : ಆಟೋ ರಿಕ್ಷಾವೊಂದಕ್ಕೆ ನಾಯಿ ಅಡ್ಡ ಬಂದಾಗ ತಪ್ಪಿಲೆತ್ನಿಸಿದಾಗ ಉಂಟಾದ ಅಪಘಾತದಲ್ಲಿ ರಿಕ್ಷಾ ಮಗುಚಿ ಚಾಲಕ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉಕ್ಕಿನಡ್ಕದಲ್ಲಿ ನಡೆದಿದೆ. ಶಿವಗಿರಿ ದೇವಣ್ಣ ನಾಯ್ಕರ ಪುತ್ರ ಪ್ರವೀಣ (29) ಮೃತ ಯುವಕ. ಪೆರ್ಲ ಪೇಟೆಯಲ್ಲಿ ರಿಕ್ಷಾ ಚಾಲಕನಾಗಿದ್ದ ಇವರು ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಬಣ್ಪುತ್ತಡ್ಕ ಭಾಗಕ್ಕೆ ಬಾಡಿಗೆ ಹೋಗಿ ಬರುತ್ತಿರುವ ವೇಳೆ ಉಕ್ಕಿನಡ್ಕ ಮೆಡಿಕಲ್ ಕಾಲೇಜು ಬಳಿ ಆಟೋ  ರಿಕ್ಷಾದ ಎದುರು ನಾಯಿಯೊಂದು ಅಡ್ಡ  ಬಂದಿತ್ತು.ತಪ್ಪಿಸಲೆತ್ನಿಸಿದಾಗ ರಿಕ್ಷಾ ಮಗುಚಿ ಬಿದ್ದಿತ್ತು. ತಕ್ಷಣ ಕಾಸರಗೋಡು  ಆಸ್ಪತ್ರೆಗೆ ದಾಖಲಿಸಲಾಗಿದ್ದು ಉನ್ನತ ಚಿಕಿತ್ಸೆಗೆ ಮಂಗಳೂರಿಗೆ ಕೊಂಡ್ಯೊಯ್ಯುವ ವೇಳೆ ಸಾವು ಸಂಭವಿಸಿತ್ತು.ಮೃತ ತಂದೆ ದೇವಣ್ಣ ನಾಯ್ಕ,ತಾಯಿ ಶಾರದ, ಮತ್ತು ಏಕ ಸಹೋದರ, ಇಬ್ಬರು ಸಹೋದರಿಯನ್ನಗಲಿದ್ದಾರೆ. ಮೃತರ ಅಗಲುವಿಕೆಗೆ ಪೆರ್ಲ ಪೇಟೆ ರಿಕ್ಷಾ ಚಾಲಕ ಮಾಲಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Post a Comment

0 Comments