Ticker

6/recent/ticker-posts

ಕೆ.ಎಸ್.ಆರ್.ಟಿ.ಸಿ.ಬಸ್ಸಿನಲ್ಲಿ ಚಾಲಕ- ಮಹಿಳಾ ಕಂಡೆಕ್ಟರ್ ಸರಸ ಸಲ್ಲಾಪ; ಚಾಲಕನ ಪತ್ನಿಯ ದೂರಿನಂತೆ ತನಿಖೆ, ಕಂಡೆಕ್ಟರ್ ಸಸ್ಪೆಂಡ್


 ಕೆ.ಎಸ್.ಆರ್.ಟಿ.ಸಿ. ಬಸ್ಸು ಚಾಲಕ ಹಾಗೂ ಮಹಿಳಾ ಕಂಡೆಕ್ಟರ್ ಮಧ್ಯೆ ಲವ್.... ಈ ಬಗ್ಗೆ ಚಾಲಕನ ಪತ್ನಿ ಸಾರಿಗೆ ಸಚಿವರಿಗೆ ನೀಡಿದ ದೂರನ್ನು ತನಿಖೆ ಮಾಡಿದ ವಿಜಿಲೆನ್ಸ್ ಅಧಿಕಾರಿಗಳು ಮಹಿಳಾ ಕಂಡೆಕ್ಟರನ್ನು ಸಸ್ಪೆಂಡ್ ಮಾಡಿದ್ದಾರೆ.  ಬಸ್ ಚಾಲಕನ ಗಮನ  ಬೇರೆಡೆಗೆ ಹರಿಯಲು ಕಾರಣಳಾದಳೆಂದು ಕಂಡೆಕ್ಟರನ್ನು ಸಸ್ಪೆಂಡ್ ಮಾಡಲಾಗಿದೆ‌. ಕೊಲ್ಲಂ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

    ಬಸ್ ಚಾಲಕ ಹಾಗೂ ಮಹಿಳಾ ಕಂಡೆಕ್ಟರ್ ಮದ್ಯೆ ಬಸ್ಸಿನಲ್ಲಿ ಮಾತ್ರವಲ್ಲ... ರಾತ್ರಿ ವಾಟ್ಸಾಪ್ ಚಾಟ್, ಸುದೀರ್ಘ ಮೊಬೈಲು ಮಾತುಕತೆ ನಡೆತ್ತಿತ್ತು. ಇದನ್ನು ಅರಿತ ಕಂಡೆಕ್ಟರನ ಪತ್ನಿ ಈ ಬಗ್ಗೆ ಸಾರಿಗೆ ಸಚಿವರಿಗೆ ದೂರು ನೀಡಿದರು. ಸಾರಿಗೆ ಸಚಿವರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು‌

    ಸಾರಿಗೆ ಇಲಾಖೆಯ ವಿಜಿಲನ್ಸ್ ಅಧಿಕಾರಿಗಳು ತನಿಖೆ ನಡೆಸಿದಾಗ ಚಾಲಕನ ಪತ್ನಿಯ ದೂರು ನಿಜವೆಂದು ತಿಳಿಯಿತು. ಇದಲ್ಲದೆ  ಕಂಡೆಕ್ಟರ್ ಬಗ್ಗೆ ಬಸ್ಸು ಪ್ರಯಾಣಿಕರೂ ದೂರು ನೀಡಿದ್ದರು. ಚಾಲಕ ಮತ್ತು ಕಂಡೆಕ್ಟರ್ ಮದ್ಯೆ ಬಸ್ಸಿನಲ್ಲಿ ನಡೆಯುವ ಸರಸ ಸಲ್ಲಾಪ ಹಲವರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು ಸಸ್ಪೆಂಡ್ ಮಾಡಲು ಹಾದಿ ಸುಗಮವಾಯಿತು. ಕಂಡೆಕ್ಟರ್ ಕೆಲವೊಮ್ಮೆ ಪ್ರಯಾಣಿಕರನ್ನೇ ಮರೆತು ಬಿಡುತ್ತಿದ್ದಳು ಎಂದು ದೂರಲಾಗಿತ್ತು.

Post a Comment

0 Comments