Ticker

6/recent/ticker-posts

ನಾಳೆ ರಾಜ್ಯದಲ್ಲಿ ಖಾಸಗಿ ಬಸ್ ಮುಷ್ಕರ


 ತಿರುವನಂತಪುರಂ: ವಿದ್ಯಾರ್ಥಿಗಳ ರಿಯಾಯಿತಿ ಟಿಕೆಟ್ ದರ ಏರಿಕೆ ಸಹಿತ  ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಳೆ (ಮಂಗಳವಾರ) ರಾಜ್ಯದಲ್ಲಿ ಖಾಸಗಿ ಬಸ್ಸುಗಳು ಮುಷ್ಕರ ನಡೆಸಲಿವೆ. ನಾಳೆ ಒಂದು ದಿನದ ಮುಷ್ಕರ ನಡೆಯಲಿದ್ದು ಈ ತಿಂಗಳ 22 ರಿಂದ ಅನಿರ್ದಿಷ್ಟ ಕಾಲ ಮುಷ್ಕರ ನಡೆಯಲಿರುವುದಾಗಿ ಖಾಸಗಿ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಇಂದು (ಸೋಮವಾರ) ಬೆಳಗ್ಗೆ ರಾಜ್ಯ ಸಾರಿಗೆ ಆಯುಕ್ತರು ಹಾಗೂ ಖಾಸಗಿ ಬಸ್ಸು ಮಾಲಕರ ಸಂಘದ ಪ್ರತಿನಿಧಿಗಳು ಮಾತುಕತೆ ನಡೆಸಿದ್ದರು.  ಆದರೆ ಮಾತುಕತೆ ವಿಫಲವಾಗಿದ್ದು ಈ ಹಿನ್ನೆಲೆಯಲ್ಲಿ ನಾಳೆ ಒಂದು ದಿನದ ಮುಷ್ಕರ ನಡೆಯಲಿದೆ.

Post a Comment

0 Comments