Ticker

6/recent/ticker-posts

ರಸ್ತೆ ಶೋಚನೀಯಾವಸ್ಥೆ ಪರಿಹಾರ ಆಗ್ರಹಿಸಿ ಪಳ್ಳತ್ತಡ್ಕದಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ


 ಬದಿಯಡ್ಕ :  ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಚೆರ್ಕಳ ಕಲ್ಲಡ್ಕ ಅಂತರ್ ರಾಜ್ಯ ರಸ್ತೆಯ ಶೋಚನೀಯ ಸ್ಥಿತಿಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ಪಳ್ಳತ್ತಡ್ಕದಲ್ಲಿ ಪ್ರತಿಭಟನೆ ಧರಣಿ ನಡೆಯಿತು.

ಡಿಸಿಸಿ ಅಧ್ಯಕ್ಷ ಪಿ ಕೆ ಫೈಸಲ್ ಉದ್ಘಾಟಿಸಿ ಮಾತನಾಡುತ್ತಾ  ಉಕ್ಕಿನಡುಕ ಮೆಡಿಕಲ್ ಕಾಲೇಜಿಗೂ,ಕರ್ನಾಟಕಕ್ಕೂ ಹಲವಾರು ಪ್ರಯಾಣಿಕರು ಈ ದಾರಿಯಲ್ಲಿ ಸಾಗುತ್ತಿರುವಾಗ ರಸ್ತೆಗಳು ಹೊಂಡ ಗುಂಡಿಯಾಗಿರುವುದು ಪ್ರಯಾಣಕ್ಕೆ ಸಂಕಷ್ಟ ಸೃಷ್ಠಿಸುತ್ತಿದೆ ಎಂದು ಅವರು ಆರೋಪಿಸಿದರು.

2016 ರಿಂದ ಟೆಂಡರ್ ಕ್ರಮಗಳನ್ನು ತೆಗೆದುಕೊಂಡರೂ ಇದುವರೆಗೆ ರಸ್ತೆ ಸಾರಿಗೆ ಯೋಗ್ಯವಾಗಿಲ್ಲದಿರುವುದು ಸರ್ಕಾರದ  ಭ್ರಷ್ಟಾಚಾರಕ್ಕೆ ನಿದರ್ಶನವಾಗಿದೆ.ಎಡನೀರಿನಿಂದ ಪಳ್ಳತ್ತಡ್ಕದ ವರೆಗೆ ವಿವಿಧ ಕಡೆಗಳಲ್ಲಿ ಮಾರಕವಾದ ಗುಂಡಿಗಳು ರೂಪುಗೊಂಡಿವೆ ಎಂದು ಇದು ಪ್ರಯಾಣಿಕರ ಜೀವನಕ್ಕೆ ಬೆದರಿಕೆಯಾಗಿದೆ ಎಂದು ತಕ್ಷಣವೇ ಪರಿಹರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಅವರು ಮುನ್ನೆಚ್ಚರಿಕೆ ನೀಡಿದರು.ಮಂಡಲ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು,ಎ ವಾಸುದೇವನ್ ನಾಯರ್, ಬ್ಲಾಕ್ ಉಪಾಧ್ಯಕ್ಷ ಖಾದರ್ ಮಾನ್ಯ,ಗಂಗಾಧರ ಗೋಳಿಯಡ್ಕ,

ಕಾರ್ಯದರ್ಶಿಗಳಾದ ಶಾಫಿ ಗೋಳಿಯಡ್ಕ,ಚಂದ್ರಹಾಸ ಮಾಸ್ಟರ್,ರಾಮ ಪಟ್ಟಾಜೆ, ಕರ್ಷಕ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ತಿರುಪತಿಕುಮಾರ್ ಭಟ್,

ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಮಂಡಲ ಸಮಿತಿ ನಾಯಕರಾದ ಕೃಷ್ಣದಾಸ್,

ಲೋಹಿತಾಕ್ಷನ್ ನಾಯರ್, ಕುಮಾರನ್ ನಾಯರ್, ಗೋಪಾಲ ಡಿ,ಸತೀಶ್ ಪೆರ್ಮುಂಡೆ, ರವಿ ಪಳ್ಳತ್ತಡ್ಕ,

ಖಮರುದ್ದೀನ್,ವಾಮನ ನಾಯ್ಕ,ವಿನ್ಸೆಂಟ್,ಬಾಬು ಪಟ್ಟಾಜೆ,ಐತ್ತಪ್ಪ ಪಟ್ಟಾಜೆ,ಶಾಫಿ ಗೋಳಿಯಡಿ,ಕುಂಞಕಣ್ಣನ್ ಚೇಡೆಕ್ಕಲ್,ರಾಮ ಗೋಳಿಯಡ್ಕ,

ಹಮೀದ್ ಮಾಸ್ಟರ್, ಜೋನಿ,ಶೆರಿಫ್ ಮುಂತಾದವರು ನೇತೃತ್ವ ವಹಿಸಿದ್ದರು.

Post a Comment

0 Comments