Ticker

6/recent/ticker-posts

ಮನೆಯ ಬೀಗ ಮುರಿದು 8 ಪವನು ಚಿನ್ನಾಭರಣ, 80 ಸಾವಿರ ರೂ.ಕಳವು, ನೀರ್ಚಾಲು ಬಳಿಯ ಬೇಳದಲ್ಲಿ ನಡೆದ ಘಟನೆ


 ಬದಿಯಡ್ಕ: ಬಾಗಿಲು ಹಾಕಿದ್ದ ಮನೆಯಿಂದ 8 ಪವನು ಚಿನ್ನಾಭರಣ ಹಾಗೂ 80 ಸಾವಿರ ರೂ ಕಳವುಗೈದ ಘಟನೆ ನಡೆದಿದೆ.‌ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬೇಳ ನಿವಾಸಿ ಜಯಪ್ರಸಾದ್ ಆಳ್ವ ಅವರ ಮನೆಯಿಂದ ಕಳವು ನಡೆದಿದೆ. ಜಯಪ್ರಸಾದ್ ಹಾಗೂ ಮನೆಯವರು  ಜೂನ್ 13 ರಂದು ಬೆಂಗಳೂರಿನಲ್ಲಿರುವ ಮಗಳ ಮನೆಗೆ ಹೋಗಿದ್ದರು. ಇಂದು (ಗುರುವಾರ) ಬೆಳಗ್ಗೆ 5.30 ಕ್ಕೆ ಅವರು  ಹಿಂತಿರುಗಿದಾಗ   ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದಿತ್ತು. ಒಳಗೆ  6 ಕಪಾಟುಗಳಿದ್ದು ಎಲ್ಲವನ್ನೂ ತೆರೆಯಲಾಗಿತ್ತು. ಒಂದು ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳವುಗೈಯ್ಯಲಾಗಿದೆಯೆಂದು ಜಯಪ್ರಸಾದ್ ಆಳ್ವ ಹೇಳಿದ್ದಾರೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು.

Post a Comment

0 Comments