Ticker

6/recent/ticker-posts

ತಿಂಗಳ ಹಿಂದೆ ನಾಪತ್ತೆಯಾಗಿ ಪೊಲೀಸರು ಪತ್ತೆ ಹಚ್ಚಿದ್ದ ಗೃಹಿಣಿ ಪುನಃ ‌


 ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಶೇಣಿ ಬಳಿಯ ಗೃಹಿಣಿ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಶೇಣಿ ಬಲ್ತಿಕಲ್ಲು  ನಿವಾಸಿ ಚಿತ್ರಕಲ(37) ನಾಪತ್ತೆಯಾದ ಮಹಿಳೆ.ಜುಲೈ 1 ರಂದು ಈಕೆ ತನ್ನ ಮೂರುವರೆ ವರ್ಷದ ಮಗುವಿನ ಜತೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಪತಿ ಗಂಗಾಧರ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಳೆದ ಜೂನ್ 1 ರಂದು ಈಕೆ ಇಬ್ಬರು ಮಕ್ಕಳ ಜತೆ ನಾಪತ್ತೆಯಾಗಿದ್ದಳು. ಅನಂತರ ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯದಲ್ಲಿ ಹಾಜರಿಪಡಿಸಿದ್ದರು.

Post a Comment

0 Comments