ಮುಂಡಿತ್ತಡ್ಕ: ಶ್ರೀ ಮಹಾವಿಷ್ಣು ಭಜನಾ ಸಂಘ ವಿಷ್ಣು ನಗರ ಮುಂಡಿತ್ತಡ್ಕ ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಹಿರಿಯ ಸದಸ್ಯರಾದ ರಾಮ ಪೂಜಾರಿ ನಡುಗುಡ್ಡೆ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ ಹಿರಿಯ ಸದಸ್ಯರಾದ ರಾಮ್ ಕುಮಾರ್ ಮುಜುಕುಮೂಲೆ ಇವರು ಸಂಘ ಹಾದು ಬಂದ ಮಾರ್ಗ ಹಾಗೂ ಇತರ ವಿಚಾರಗಳನ್ನು ಪ್ರಸ್ತಾಪಿಸಿದರು.ಹಿರಿಯರಾ ಚಿದಾನಂದ ಆಳ್ವ ಮಂಜಕೊಟ್ಟಿಗೆ ತಮ್ಮ ಅನುಭವಗಳನ್ನು ಹಂಚಿ,ಸಂಘದೊಂದಿಗಿನ ಸಂಬಂಧವನ್ನು ಸ್ಮರಿಸಿದರು.ನಂತರ 2024-25ನೇ ಸಾಲಿನ ಲೆಕ್ಕಪತ್ರವನ್ನು ಕೋಶಾಧಿಕಾರಿಯಾದ ಶ್ರೀ ಶಾಂತ ಕುಮಾರ್ ಮಂಡಿಸಿದರು.ಲೆಕ್ಕ ಪತ್ರವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. ಮಂದಿರದ ಪ್ರಧಾನ ಆರ್ಚಕರಾದ ಭಾಸ್ಕರ ಪೂಜಾರಿ 'ಭಜನೆಯೇ ಭಗವಂತನಿಗೆ ಅತ್ಯಂತ ಪ್ರಿಯವಾದುದು.ಎಲ್ಲರೂ ಭಗವಂತನ ಸ್ಮರಣೆಯಲ್ಲಿ ತಲ್ಲೀನರಾಗೋಣ ಎಂದು ಹಿತನುಡಿಗಳನ್ನಾಡಿದರು. ಭಜನಾ ಸಂಘದ ಅಧ್ಯಕ್ಷರಾದ ವಿನೋದ್ ಕುಮಾರ್ ಏಳ್ಕಾನ ನಮ್ಮ ಹಿಂದು ಸಮಾಜ ತುಂಬಾ ಬದಲಾಗಬೇಕು. ನಾವೆಲ್ಲರೂ ಧರ್ಮ ರಕ್ಷಣೆಯ ಕಾರ್ಯಕ್ಕೆ ಅಣಿಯಾಗಬೇಕು ಎಂದು ಕರೆ ನೀಡಿದರು.ತದನಂತರ ನೂತನ ಸಮಿತಿಯನ್ನು ರಚಿಸಲಾಯಿತು.2025-26 ನೇ ಸಾಲಿಗೆ ಅಧ್ಯಕ್ಷರಾಗಿ ಹರೀಶ್ ಮುಂಡಿತ್ತಡ್ಕ ಉಪಾಧ್ಯಕ್ಷರಾಗಿ ಸುಂದರ ಯಸ್ ಕಟ್ನಡ್ಕ ,ಉಗ್ಗಪ್ಪ ಕುಲಾಲ್ ಮುಂಡಿತ್ತಡ್ಕ ,ಪ್ರಧಾನ ಕಾರ್ಯದರ್ಶಿಯಾಗಿ ವಾಸು ನಾಯ್ಕ ಬೀರಿಕುಂಜ,ಜೊತೆ ಕಾರ್ಯದರ್ಶಿಗಳಾಗಿ ಸುನಿಲ್ ಮಾಸ್ತರ್ ಮುಂಡಿತ್ತಡ್ಕ, ಗಣೇಶ್ ಮುಂಡಿತ್ತಡ್ಕ, ಕೋಶಾಧಿಕಾರಿಯಾಗಶಾಂತ ಕುಮಾರ್ ಮುಂಡಿತ್ತಡ್ಕ, ಭಜನಾ ಮೇಲ್ವಿಚಾರಕರಾಗಿ ಸೂರ್ಯಪ್ರಕಾಶ್ ಶೇಡಿಮೂಲೆ ಮತ್ತು ಪುನೀತ್ ಎರ್ಮೆತ್ತೊಟ್ಟಿ, ಭಜನಾ ತಂಡದ ಸಂಚಾಲಕರಾಗಿ ಮೋಕ್ಷಿತ್ ಕುಮಾರ್ ಮುಂಡಿತ್ತಡ್ಕ,ಪಾತ್ರೆ ಸಾಮಾಗ್ರಿಗಳ ಮೇಲ್ವಿಚಾರಕರಾಗಿ ಭಾಸ್ಕರ ಮುಂಡಿತ್ತಡ್ಕ ಹಾಗೂ 25 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.ಶ್ರೀ ವಿಷ್ಣು ಕಲಾವೃಂದದ ಅಧ್ಯಕ್ಷರಾದ ಮೋಕ್ಷಿತ್ ಕುಮಾರ್ , ಶ್ರೀ ವಿಷ್ಣು ಮಹಿಳಾ ಸಂಘದ ಉಪಾಧ್ಯಕ್ಷೆಯಾದ ಪುಷ್ಪ ಒಳಮೊಗರು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಸೂರ್ಯಪ್ರಕಾಶ್ ಸ್ವಾಗತಿಸಿ ನೂತನ ಕಾರ್ಯದರ್ಶಿ ವಾಸು ನಾಯ್ಕ ವಂದಿಸಿದರು. ಭಜನಾ ಸಂಘದ ಜೊತೆ ಕಾರ್ಯದರ್ಶಿ ಶ್ರೀ ಸುನಿಲ್ ಮಾಸ್ತರ್ ಕಾರ್ಯಕ್ರಮವನ್ನು ನಿರೂಪಿಸಿದರು.
0 Comments