ಕಾಸರಗೋಡು: ಕೊಟ್ಟಯಂನಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಕಟ್ಟಡ ಮುರಿದು ಬಿದ್ದು ಮಹಿಳೆ ಮೃತಪಟ್ಟ ಘಟನೆಯ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಜನರಲ್ ಆಸ್ಪತ್ರೆಗೆ ಮಾರ್ಚ್ ನಡೆಯಿತು.
ಪ್ರತಿಭಟನಾ ಮೆರವಣಿಗೆಯನ್ನು ಎಲ್.ಐ.ಸಿ ಕಚೇರಿ ಬಳಿ ಪೊಲೀಸರು ತಡೆದರು. ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ತೀವ್ರಗೊಂಡಾಗ ಪೊಲೀಸರು ಜಲಪಿರಂಗಿ ಬಳಸಿದರು.
0 Comments