ಬೆಕ್ಕು ಪರಚಿ ಗಾಯಗೊಂಡ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪಂದಳಂ ಕಡಕ್ಕಾಡ್ ನಿವಾಸಿ ಆಶ್ರಫ್ ಎಂಬವರ ಪುತ್ರಿ ಹನ್ನ ಅಶ್ರಫ್ (13) ಮೃತಪಟ್ಟ ಬಾಲಕಿ. ಈಕೆಯ ಸಾವು ಬೆಕ್ಕು ಪರಚಿ ಸಂಭವಿಸಿದೆ ಎಂಬ ಬಗ್ಗೆ ಆರೋಗ್ಯ ಇಲಾಖೆ ದೃಡೀಕರಿಸಿಲ್ಲ.
ಜುಲೈ 2 ರಂದು ಹನ್ನಾಳ ಕೈಗೆ ಮನೆಯ ಬೆಕ್ಕು ಪರಚಿತ್ತು. ಕೂಡಲೇ ಬಾಲಕಿಗೆ ಎರಡು ಡೋಸ್ ಹುಚ್ಚು ನಾಯಿ ಕಚ್ಚಿದವರಿಗೆ ನೀಡುವ ಲಸಿಕ ನೀಡಲಾಗಿತ್ತು. ಎರಡನೇ ಡೋಸ್ ಲಸಿಕೆ ತೆಗೆದ ನಂತರ ಮನೆಗೆ ಬಂದಾಗ ಬಾಲಕಿ ಕುಸಿದು ಬಿದ್ದಳು. ಕೂಡಲೇ ಪತ್ತನಂತಿಟ್ಟ ಆಸ್ಪತ್ರೆಗೂ ಅನಂತರ ಕೊಟ್ಟಯಂ ಮೆಡಿಕಲ್ ಕಾಲೇಜಿಗೂ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಾಕಾರಿಯಾಗದ ಹಿನ್ನೆಲೆಯಲ್ಲಿ ಬಾಲಕಿ ಮೃತ ಪಟ್ಟಳು. ಬಾಲಕಿ ಡೆಂಗ್ಯು ಅತವಾ ನಿಪಾ ರೋಗ ಬಾಧಿತಳಾಗಿ ಮೃತಪಟ್ಟಿರಬಹುದೇ ಎಂದೂ ಶಂಕೆ ಉಂಟಾಗಿದೆ.
0 Comments