ಮಂಜೇಶ್ವರ: 45 ನೇ ವರ್ಷದ ಸಾರ್ವಜನಿಕ ಮಂಜೇಶ್ವರ ಗಣೇಶೋತ್ಸವದ ಶ್ರೀ ಮಾಹಾಗಣಪತಿ ದೇವರ ವಿಗ್ರಹ ಮುಹೂರ್ತವು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ವೈದಿಕ ವಿಧಿವಿದಾನಗಳೊಂದಿಗೆ ನಡೆಯಿತು.ಕಾರ್ಯಕ್ರಮದಲ್ಲಿ ಸಮಿತಿಯ ಗೌರವಧ್ಯಕ್ಷರದ ಹೈಮೇಶ್ ಬಿ.ಎಂ, ಅಧ್ಯಕ್ಷರಾದ ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಹೆಗ್ಡೆ ಮಂಜೇಶ್ವರ, ಕೋಶಾಧಿಕಾರಿ ನವೀನ್ ಅಡಪ್ಪ, ಪ್ರಧಾನ ಸಂಚಾಲಕರಾದ ನ್ಯಾ/ನವೀನ್ ರಾಜ್ ( ಕ್ಷೇತ್ರದ ಅಧ್ಯಕ್ಷರು ) ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ,ಕ್ಷೇತ್ರದ ಗುರುಸ್ವಾಮಿ ಉದಯ ಪಾವಳ, ಅರ್ಚಕರಾದ ತಿರುಮಲೇಶ್ ಆಚಾರ್ಯ, ದಿನಕರ ಬಿ.ಎಂ, ಕೃಷ್ಣ ಜಿ.ಮಂಜೇಶ್ವರ,ನವೀನ್ ಕೌಡೂರು, ಪದ್ಮನಾಭ ಬಾಡೂರು,ರಮೇಶ್ ಹೊಸಂಗಡಿ, ಭಾಸ್ಕರ ಹೊಸಂಗಡಿ, ಭಾಸ್ಕರ ಅಂಗಡಿಪದವು, ಶಿವಪ್ರಸಾದ್ ಪೆಲಪ್ಪಾಡಿ, ಚಂದ್ರಹಾಸ ಪೆಲಪ್ಪಾಡಿ, ನರೇಂದ್ರ ಹೆಗ್ಡೆ,ಅಯ್ಯಪ್ಪ ಕ್ಷೇತ್ರದ ಪ್ರದಾನಾ ಕಾರ್ಯದರ್ಶಿ ದೇವರಾಜ್ ಎಂ. ಎಸ್. ಕೋಶಾಧಿಕಾರಿ ಸುನಿಲ್ ಕುಮಾರ್ ಗಾಣಿಗ ಮೊದಲಾದವರು ಪಾಲ್ಗೊಂಡರು. ವಿಗ್ರಹ ರಚಣೆಯನ್ನು ಶಿಲ್ಪಿ ಮಹೇಶ್ ಆಚಾರ್ಯ ಬಾಯರು ನೆರವೇರಿಸಲಿದ್ದಾರೆ.ಹಾಗೂ ವಿಗ್ರಹವನ್ನು ಶ್ರೀ ಕಿರಣ್ ಶೆಟ್ಟಿ ಉದ್ಯಾವರ ಮಾಡ ಹಾಗೂ ಮನೆಯವರು ತಮ್ಮ ಸೇವಾರೂಪವಾಗಿ ನೀಡಲಿದ್ದಾರೆ
0 Comments