ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ ವತಿಯಿಂದ ಕಾಟುಕುಕ್ಕೆಯ ಸೂರ್ಡೇಲ್ ನಲ್ಲಿ ಕಾರ್ಯಚರಿಸುತ್ತಿರುವ ಹರಿತ ಕರ್ಮದ ಎಂಸಿಎಫ್ ಸೆಂಟರ್ ನಲ್ಲಿ ಪ್ಲಾಸ್ಟಿಕ್ ಮಾಲಿನ್ಯಗಳ ಗೋಣಿಗಳೆಡೆಯಲ್ಲಿ ಹೆಬ್ಬಾವೊಂದು ಬೆಚ್ಚನೆ ಮಲಗಿದ್ದು ಗುರುವಾರ ಕರ್ತವ್ಯಕ್ಕೆ ಬಂದ ಕಾರ್ಯಕರ್ತೆಯರು ಬೆಚ್ಚಿ ಬಿದ್ದರು.
ತಕ್ಷಣ ಪಂಚಾಯತಿಗೆ ಮಾಹಿತಿ ನೀಡಿದ್ದು ಪತ್ತೆಯಾದ ಹೆಬ್ಬಾವನ್ನು ಹಿಡಿದು ಅರಣ್ಯಗಳಿಗೆ ಬಿಡಲಾಯಿತು. ಎಂಸಿಎಫ್ ಕೇಂದ್ರವು ಸುತ್ತಲೂ ಕಾಡು ಪೊದೆಗಳ ನಡುವೆ ಇರುವ ಕಾರಣ ಹೆಬ್ಬಾವು ಸಹಿತ ವಿಷಕಾರಿ ಜಂತುಗಳು ಆಶ್ರಯ ಪಡೆಯುವಂತದ್ದಾಗಿದೆ. ಈ ಹಿನ್ನಲೆಯಲ್ಲಿ ಸುರಕ್ಷತೆಯನ್ನು ಏರ್ಪಡಿಸಬೇಕಾಗಿದೆ ಎಂದು ಹರಿತ ಕರ್ಮ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.
0 Comments