ಪಡುಕುತ್ಯಾರು : ಬದುಕಿನಲ್ಲಿ ಗುರುವಿನ ಅನುಗ್ರಹ ಇರಬೇಕು. ಗುರುವಿನ ಅನುಗ್ರಹ ಇದ್ದರೆ ಅದು ಸಂತಸದ ಬದುಕು, ಅನುಗ್ರಹ ಇಲ್ಲದಿದ್ದರೆ ಸಂಕಟದ ಬದುಕಾಗುತ್ತದೆ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ಸೋಮವಾರ ಆರಂಭವಾದ ಚಾತುರ್ಮಾಸ್ಯ ವ್ರತಾಚರಣೆ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಬದುಕು ಸಂತಸವಾಗಿರಬೇಕೋ, ಸಂಕಟವಾಗಿರಬೇಕೋ, ಸಂಘರ್ಷವಾಗಿರಬೇಕೋ, ಉತ್ಸವವಾಗಿರಬೇಕೋ ಎಂಬುದು ನಮ್ಮ ನಡೆನುಡಿಯಲ್ಲಿ ವ್ಯಕ್ತವಾಗುತ್ತದೆ. ಬದುಕನ್ನು ರೂಡಿಯನ್ನಾಗಿಸುವ ಗುರುವಿನ ಮಾರ್ಗದರ್ಶನ ಎಲ್ಲರಿಗೂ ಕೂಡಾ ಬೇಕು ಎಂದರು.
ಶಾಸ್ತ್ರ ಸಹಿತವಾದ ಶಿಲ್ಪದಿಂದ ಮಾತ್ರ ಶಿಲ್ಪಿಯಾಗಲು ಸಾಧ್ಯ, ಅ ನಿಟ್ಟಿನಲ್ಲಿ ಪಡುಕುತ್ಯಾರಿನಲ್ಲಿ ವಿಶ್ವಕರ್ಮ ಸಮಾಜದ ಪಂಚಶಿಲ್ಪ ತರಬೇತಿ ಕೇಂದ್ರ ಸ್ಥಾಪನೆ ಮಾಡಿ ಶಾಸ್ತ್ರ ಸಹಿತವಾದ ಶಿಲ್ಪಕಲೆ ತರಬೇತಿ ನೀಡಲಾಗುವುದು. ಶಿಲ್ಪಕಲೆ ತರಬೇತಿ, ಸಂಶೋಧನಾ, ತಯಾರಿಕಾ, ಪ್ರದರ್ಶನ ಮತ್ತು ಮಾರಾಟ ಕೇಂದ್ರ ಶೀಘ್ರದಲ್ಲಿ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಮತ್ತು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಡೇರ ಹೋಬಳಿ ಶ್ರೀಧರ ಆಚಾರ್ಯ ಮಾತನಾಡಿ, ಗುರುಗಳ ಪ್ರತೀ ಚಾತುರ್ಮಾಸ್ಯದಲ್ಲಿಯೂ ಸಂಸ್ಥಾನದಲ್ಲಿನ ಅಭಿವೃದ್ಧಿ ಕಾರ್ಯಗಳು ವೇಗ ಪಡೆಯುತ್ತಿವೆ. ಸಂಸ್ಥಾನದ ಬಳಿ ಖರೀದಿಸಿರುವ ೧.೭೨ ಎಕರೆ ಜಮೀನಿನಲ್ಲಿ ಅರ್ಚಕರಿಗೆ ವಸತಿ, ಕಾರ್ಮಿಕರಿಗೆ ಮನೆ ಹಾಗೂ ಪಂಚಶಿಲ್ಪ ತರಬೇತಿ ಕೇಂದ್ರ ಸ್ಥಾಪನೆ, ವೇದಪಾಠ ಶಾಲೆಯಲ್ಲಿ ಪಾಕಶಾಲೆ ಹಾಗೂ ಭೋಜನಶಾಲೆ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ನುಡಿದರು.
ಪಟ್ಟದ ದೇವರಾದ ಸರಸ್ವತಿ ದೇವರಿಗೆ ಸ್ವರ್ಣ ಕಿರೀಟವನ್ನು ಸಮರ್ಪಿಸಿದ ಸುಧಾ ಸಂಜೀವ ಬಿ ಪತ್ತಾರ್ ಅಥಣಿ, ಗಣಪತಿ ದೇವರಿಗೆ ಚಿನ್ನದ ಸರ ಸಮರ್ಪಣೆ ಮಾಡಿದ ಕಾಡಬೆಟ್ಟು ನಾಗರಾಜ ಆಚಾರ್ಯ ಉಡುಪಿ, ಚಂದ್ರ ಮೌಳೀಶ್ವರ ದೇವರ ಸ್ಪಟಿಕ ಲಿಂಗಕ್ಕೆ ಚಿನ್ನದ ಕವಚ ಸಮರ್ಪಿಸಿದ ಬಿ ಮೋಹನ್ ಕುಮಾರ್ ಬೊಳ್ಳೂರು, ಸ್ಟೀಲ್ ಸಲಕರಣೆಗಳನ್ನು ಸಮರ್ಪಿಸಿದ ಆನೆಗುಂದಿ ಗುರು ಸೇವಾ ಪರಿಷತ್ ಮಹಾಮಂಡಲ ಉಡುಪಿ ಅಧ್ಯಕ್ಷ ಸುಧಾಕರ ಆಚಾರ್ಯ ಕುಕ್ಕಿಕಟ್ಟೆ, ಅನ್ನದಾನ ಕೊಡುಗೆ ನೀಡಿದ ಹರ್ಷಿತ ಸೂರಜ್ ಗೋಪಾಲ್ ಆಚಾರ್ಯ ಅಬುದಾಬಿ, ಯು ಕೆ ಎಸ್ ಸೀತಾರಾಮ ಆಚಾರ್ಯ ಉಪ್ರಳ್ಳಿ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮಾ ಬಾರ್ಕೂರು,ದೇವಸ್ಥಾನದ ಧರ್ಮದರ್ಶಿಗಳಾದ ಪಡುಬಿದ್ರಿ ದಿನೇಶ್ ಆಚಾರ್ಯ ಆನೆಗುಂದಿ, ಕೋಟೆಕಾರು ಪ್ರಭಾಕರ ಆಚಾರ್ಯ ಮಧೂರು,ಬಿ ಎಂ ಯದುನಂದನ ಆಚಾರ್ಯ ಬಂಗ್ರಮಂಜೇಶ್ವರ, ಜನಾರ್ದನ ಆಚಾರ್ಯ ಆರಿಕ್ಕಾಡಿ ಕುಂಬಳೆ, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಗಣೇಶ ಆಚಾರ್ಯ ಕಾಪು, ಶ್ರೀಧರ ಆಚಾರ್ಯ ಪನ್ವೇಲ್,ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ,ಉಳಿಯ ಶಿವರಾಮ ಆಚಾರ್ಯ ಮೂಡುಬಿದರೆ, ಯೋಗೀಶ್ ಆಚಾರ್ಯ ಮೂಡುಬಿದ್ರೆ, ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ ,ಜಗದೀಶ್ ಆಚಾರ್ಯ ಪಡುಪಣಂಬೂರು,ಮುರಹರಿ ಆಚಾರ್ಯ ಕಟಪಾಡಿ,ಗಣಪತಿ ಆಚಾರ್ಯ ಶಂಕರಪುರ,ಗಂಗಾಧರ ಆಚಾರ್ಯ ದಿಂಡಿಬೆಟ್ಟು, ಸಹ ಟ್ರಸ್ಟ್ ಸಮಿತಿಗಳ ಪದಾಧಿಕಾರಿಗಳಾದ ಬಿ ಸೂರ್ಯ ಕುಮಾರ್ ಹಳೆಯಂಗಡಿ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ,ಗಣೇಶ್ ಆಚಾರ್ಯ ಕೆಮಣ್ಣು,ವಿದ್ವಾನ್ ಕೇಶವ ಶರ್ಮಾ ಇರುವೈಲು, ಸುಂದರ ಆಚಾರ್ಯ ಬೆಳುವಾಯಿ, ಉದ್ಯಮಿ ವಿಶ್ವನಾಥ್ ರಾವ್ ಕತಾರ್, ವೈ ಧರ್ಮೇಂದ್ರ ಆಚಾರ್ಯ ಮಧೂರು, ವಿಶ್ವಸ್ತರಾದ ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು,ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಬ್ರಹ್ಮಶ್ರೀ ಸೋಮಚಾರ್ ಕಡ್ಲಾಸ್ಕರ್ ಬೆಂಗಳೂರು, ತ್ರಾಸಿ ಸುಧಾಕರ ಆಚಾರ್ಯ ಉಪಸ್ಥಿತರಿದ್ದರು.
ವಾದಿರಾಜ ಆಚಾರ್ಯ ಮಂಗಳೂರು, ವಸಂತ ಆಚಾರ್ಯ ಮಜೂರು, ಗುರುರಾಜ್ ಕೆ ಜೆ ಆಚಾರ್ಯ , ಶೇಖರ ಆಚಾರ್ಯ ಮಂಗಳೂರು, ಜಿ.ಟಿ ಆಚಾರ್ಯ ಮುಂಬಯಿ, ಶ್ರೀಧರ ಜೆ. ಆಚಾರ್ಯ ಕಟಪಾಡಿ, ಯಜ್ಞೇಶ್ವರ ಆಚಾರ್ಯ ಕುತ್ಯಾರು, ರಾಘವೇಂದ್ರ ಆಚಾರ್ಯ ಕಟಪಾಡಿ, ಜಯಕರ ಆಚಾರ್ಯ ಕರಂಬಳ್ಳಿ, ರತ್ನಾಕರ ಆಚಾರ್ಯ ಉದ್ಯಾವರ, ಹರೀಶ್ ಆಚಾರ್ಯ ಕಾರ್ಕಳ, ಸುರೇಶ್ ಆಚಾರ್ಯ ನಿಟ್ಟೆ, ದಯಾನಂದ ಆಚಾರ್ಯ ಕೆಳಾರ್ಕಳ ಬೆಟ್ಟು, ಕೆ,ಎಂ ಮಧುಸೂಧನ ಆಚಾರ್ಯ ಕಾಸರಗೋಡು, ಲೋಲಾಕ್ಷ ಶರ್ಮಾ ಪಡುಕುತ್ಯಾರು, ನವೀನ್ ಆಚಾರ್ಯ ಪಣಿಯೂರು, ದಿನೇಶ್ ಆಚಾರ್ಯ ಕಿನ್ನಿಗೋಳಿ, ಲತಾ ಎಸ್ ಆಚಾರ್ಯ ಕುತ್ಯಾರು, ದೀಪಾ ಸುರೇಶ್ ಆಚಾರ್ಯ ಕಟಪಾಡಿ, ಆಶಾ ನಾಗರಾಜ ಆಚಾರ್ಯ , ರಮಾ ಅಚ್ಯುತ ಆಚಾರ್ಯ ವಿವಿಧ ವಿಭಾಗಗಳಲ್ಲಿ ನೇತೃತ್ವ ನೀಡಿದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೆ.ಎಂ. ಗಂಗಾಧರ ಆಚಾರ್ಯ ಹಾಗೂ ಗೀತಾಚಂದ್ರ ಆಚಾರ್ಯ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ವಂದಿಸಿದರು.
ವಿಶ್ವಕರ್ಮ ಯಜ್ಞದ ಬಳಿಕ ಜಗದ್ಗುರುಗಳು ವ್ಯಾಸ ಪೂಜೆಯೊಂದಿಗೆ ಚಾತುರ್ಮಾಸ್ಯ ಸಂಕಲ್ಪ ಕೈಗೊಂಡರು. ಬ್ರಹ್ಮಶ್ರೀ ಶ್ರೀಧರ ಶರ್ಮಾ ಕಟಪಾಡಿ ,ಬ್ರಹ್ಮಶ್ರೀ ಅಕ್ಷಯ ಶರ್ಮಾ ಕಟಪಾಡಿ ಅವರ ನೇತೃತ್ವದಲ್ಲಿ ಶ್ರೀ ಸರಸ್ವತೀ ಪೂರ್ವ ಚಾತ್ರಾ ಸಂಘದವರು ವೈದಿಕ ಕಾರ್ಯಕ್ರಮದಲ್ಲಿ ಭಾಗಿಯಾದರು.
ಗುರುವಂದನಾ ಕಾರ್ಯಕ್ರಮ
ಭಾರತೀಯ ಜನತಾ ಪಕ್ಷದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಬಿಜೆಪಿ ನೂತನ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಹಾಗೂ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಗುರುಗಳಿಗೆ ಫಲನ್ಯಾಸ ಮಾಡಿ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಗವೇಣಿ ಯು ಕೆ ಎಸ್ ಆಚಾರ್ಯ ಉಪ್ಪರಹಳ್ಳಿ ಭಕ್ತಿ ಗಾನ ಹಾಡಿದರು ಬಳಿಕ ಕೆ.ಜೆ ಗಣೇಶ್ ಬಳಗದವರಿಂದ ನಡೆದ ಯಕ್ಷಗಾನ ಗಾನ ವೈಭವವನ್ನು ಕಾರ್ಯದರ್ಶಿ ಜನಾರ್ದನ ಆಚಾರ್ಯ ಕನ್ಯಾನ ನಿರೂಪಿಸಿದರು.
0 Comments