ಪೆರ್ಲ : ಕೂಲಿ ಕಾರ್ಮಿಕನೋರ್ವನ ಮೃತದೇಹ ಬಾಡಿಗೆ ಮನೆಯೊಂದರೊಳಗೆ ಪತ್ತೆಯಾಗಿದ್ದು ದುರ್ವಾಸನೆ ಬೀರುತ್ತಿದ್ದು ಎರಡು ದಿನಗಳ ಹಿಂದೆ ಸಾವನ್ನಪ್ಪಿರಬೇಕೆಂದು ಸಂಶಯಿಸಲಾಗಿದೆ.ಪುತ್ತಿಗೆ ಪಂಚಾಯತಿನ ಸಂಟನಡ್ಕ ನಿವಾಸಿ ದಿ.ರಾಮನಾಯ್ಕರ ಪುತ್ರ ಕೂಲಿ ಕಾರ್ಮಿಕನಾಗಿರುವ ಗುಂಡ ಯಾನೆ ಐತ್ತಪ್ಪ(40) ನ ಮೃತದೇಹ ಇದೆಂದು ಗುರುತಿಸಲಾಗಿದೆ.
ಈತ ಶೇಣಿ ಶಾಲಾ ಸಮೀಪದ ಬಾಡಿಗೆ ಮನೆಯೊಂದರೊಳಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ರವಿವಾರ ರಾತ್ರೆ ಕಂಡು ಬಂದಿದ್ದು ಬದಿಯಡ್ಕ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ಕಳೆದ ಶುಕ್ರವಾರ ಕೆಲಸಕ್ಕೆ ಹೋಗದೆ ಈ ಪರಿಸರದಲ್ಲಿ ತಿರುಗಾಡುತ್ತಿರುವುದನ್ನು ಹಲವರು ಕಂಡಿದ್ದು ಅಮಿತ ಮದ್ಯಪಾನಿಯಾಗಿದ್ದ ಈತ ಶುಕ್ರವಾರ ರಾತ್ರಿ ಸಾವನ್ನಪ್ಪಿರಬೇಕೆಂದು ಸಂಶಯಿಸಲಾಗಿದೆ. ರವಿವಾರ ಈತನನ್ನು ಕಾಣದಿರುವಾಗ ಸ್ಥಳೀಯ ಅಂಗಡಿಯವರು ರೂಮು ಪರೀಶಿಲನೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದು ಪಂಚನಾಮೆ ನಡೆಸಿ ಮೃತದೇಹ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.ಮೃತರು ಅವಿವಾಹಿತರಾಗಿದ್ದು ಇವರ ತಂದೆ ತಾಯಿ ಈ ಹಿಂದೆಯೇ ತೀರಿಕೊಂಡಿದ್ದರು. ಸಹೋದರರಾದ ಚಂದ್ರ ನಾಯ್ಕ ,ಹರೀಶ ಸಹೋದರಿಯರಾದ ಪುಷ್ಪಾ,,ಜಯಲಕ್ಷ್ಮಿ ಎಂಬಿವರನ್ನಗಲಿದ್ದಾರೆ.
0 Comments