Ticker

6/recent/ticker-posts

ಸಹನೆ ಇದ್ದಲ್ಲಿ ನೆಮ್ಮದಿಯ ಬದುಕು ಸಾಧ್ಯ -ಆನೆಗುಂದಿಶ್ರೀ; ಚಾತುರ್ಮಾಸ್ಯದ ವೇಳೆ ಗುರುಪಾದುಕಾ ಪೂಜೆ ವೇಳೆ ಆಶೀರ್ವಚನ


 ಪಡುಕುತ್ಯಾರು: ಜೀವನದಲ್ಲಿ ತಾಳ್ಮೆಅತಿ ಅಗತ್ಯ, ಸುಖ ದುಃಖಗಳು ಇಂದ್ರಿಯ ಸ್ಪರ್ಶಗಳು ಮಾತ್ರ. ಅವು ಬಂದು ಹೋಗುವಂತವಲ್ಲದೆ ಶಾಶ್ವತವಲ್ಲ. ಎನ್ನುವ ನಂಬಿಕೆಯಿದ್ದಲ್ಲಿ ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮಿಗಳವರು ನುಡಿದರು.

ಅವರ ಚಾತುರ್ಮಾಸ್ಯದ ವೇಳೆ ಗುರುಪಾದುಕಾ ಪೂಜೆ ವೇಳೆ ಆಶೀರ್ವಚನ ನೀಡುತ್ತಿದ್ದರು.

ತಾಳ್ಮೆಯು ಮನಸಿಗೆ ಆಭರಣವಾದರೆ,ಮುಗುಳು ನಗು ಮುಖಕ್ಕೆ ಆಭರಣ. ಮಗುವನ್ನೂ ಕೂಡ ಮಾತಾಡಿಸಲ್ಲ ಏಕೈಕ ಭಾಷೆ ಅಂದರೆ ಮುಗುಳುನಗೆ. ಎಲ್ಲರೂ ಅರಳಿದ ಮುಖ ಅರಳಿದ ಹೂವನ್ನು ಇಷ್ಟಪಡುವರೇ ಹೊರತು ಬಾಡಿದ ಮುಖ ಮತ್ತು ಬಾಡಿದ ಹೂವನ್ನಲ್ಲ.

 ಪುರಾಣ ಪುರುಷರಾದ ಶ್ರೀರಾಮಚಂದ್ರ ಶ್ರೀ ಕೃಷ್ಣ, ಸಂತರಾದ ತುಕಾರಾಮ ಏಕನಾಥ ಇವರ ಜೀವನದಲ್ಲಿಯೂ ಸುಖ ದುಃಖಗಳು ಇದ್ದವು. ಅವರ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ಆದರೆ ಅವರೆಲ್ಲರ ಮುಖದಲ್ಲೂ ಎಂದು ಮುಗುಳು ನಗು ಮಾಸಿರಲಿಲ್ಲ.

ಇದಕ್ಕೆ ಪ್ರಮುಖ ಕಾರಣ ತಾಳ್ಮೆ ಸಹನೆ  ಎಂದು ಅವರು ವಿವರಣೆ ನೀಡಿದರು.ವೃಕ್ಷೋ ರಕ್ಷತಿ ರಕ್ಷಿತಃ ಇದು ಇಂದು ಅತಿ ಅಗತ್ಯ. ದೇಶದಲ್ಲಿ 33 ಶೇಕಡ ಇರುವ ಕಾಡು ಎಂದು 10 ಶೇಕಡಕ್ಕೆ ಇಳಿದಿದೆ ಎಲ್ಲ ಹವಾಮಾನ ವೈಪರಿತ್ಯಕ್ಕೆ ಇದೇ ಕಾರಣವಾಗುತ್ತಿದೆ. "ನನ್ನ ತಾಯಿಯ ಹೆಸರಿನಲ್ಲಿ ಒಂದು ಗಿಡ " ಎನ್ನುವ ಕಲ್ಪನೆಯೊಂದಿಗೆ ವಿಶ್ವಕರ್ಮ ಬ್ಯಾಂಕ್ ನಡೆಸುವ ವನ ಮಹೋತ್ಸವ ಅಭಿನಂದನೀಯ ಎಂದು ಅವರು ನುಡಿದರು.


ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ,ಉಪಾಧ್ಯಕ್ಷ ಶ್ರೀ ಜಗದೀಶ್ ಆಚಾರ್ಯ ಪಡುಪಣಂಬೂರುನಿರ್ದೇಶಕರಾದ ಶ್ರೀ ಡಿ. ಭಾಸ್ಕರ ಆಚಾರ್ಯ, ಶ್ರೀ ಸೀತಾರಾಮ ಆಚಾರ್ಯ ಬೆಳುವಾಯಿ,ಶ್ರೀ ಜಯಪ್ರಕಾಶ್ ಆಚಾರ್ಯ,ಶ್ರೀ ಜಗದೀಶ್ ಜೆ. ಆಚಾರ್ಯ ಕಪ್ಪೆಟ್ಟು,ಶ್ರೀ ಭರತ್ ಲೋಕೇಶ್ ಆಚಾರ್ಯ,ಶ್ರೀ ಹರಿಪ್ರಸಾದ್ ಆಚಾರ್ಯ,ವ್ಯವಸ್ಥಾಪಕ ನಿರ್ದೇಶಕರು  ಶ್ರೀ ವಸಂತ ಅಡ್ಯಂತಾಯ ಮತ್ತು ಸಿಬ್ಬಂದಿ ವರ್ಗದವರು,

 ಶಿಲ್ಪಿ ಪ್ರಭಾಕರ ಆಚಾರ್ಯ ಜೋಕಟ್ಟೆ,ಗಣೇಶ್ ಆಚಾರ್ಯ, ಸುಂದರ ಆಚಾರ್ಯ ಬೆಳುವಾಯಿ, ರವೀಂದ್ರ ಮಂಗಳಾದೇವಿ, ಸುಂದರ ಆಚಾರ್ಯ ಕಟಪಾಡಿ,  ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಶಿಷ್ಯ ವೃಂದದವರು ಗುರುಪಾದುಕಾ ಪೂಜೆಯಲ್ಲಿ ಭಾಗವಹಿಸಿದ್ದರು.ಚಾತುರ್ಮಾಸ್ಯ ವ್ರತನಿರ್ವಹಣಾ ಸಮಿತಿಯ  ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ಒಡೆಯರಹೋಬಳಿ,ಪದಾಧಿಕಾರಿಗಳಾದ ಬಿ ಸೂರ್ಯಕುಮಾರ್ ಹಳೆಯಂಗಡಿ,

 ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ಯ ಕಂಬಾರ್ ಕಾರ್ಯಕ್ರಮ ನಿರೂಪಿಸಿದರು. ಮಹಾಸಂಸ್ಥಾನದ  ಪ್ರಧಾನ ಆಪ್ತ ಸಹಾಯಕರಾದ ಲೋಲಾಕ್ಷ ಶರ್ಮ ಕಟಪಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ವಂದಿಸಿದರು.

Post a Comment

0 Comments