Ticker

6/recent/ticker-posts

ರಾತ್ರಿ ಕರ್ತವ್ಯದ ವೇಳೆ ನಿದ್ದೆ ಮಾಡಿದ ವನಿತಾ ಕಾನ್ ಸ್ಟೇಬಲ್ ಸಹಿತ ಮೂರು ಮಂದಿ ಪೊಲೀಸ್ ಅಧಿಕಾರಿಗಳ ಸಸ್ಪೆಂಡ್


 ರಾತ್ರಿ ಕರ್ತವ್ಯದ ವೇಳೆ ನಿದ್ದೆ ಮಾಡಿದ ವನಿತಾ ಪೇದೆ ಸಹಿತ ಮೂರು ಮಂದಿ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಎರ್ನಾಕುಲಂ ಜಿಲ್ಲೆಯ ಪೆರುಂಬಾವೂರು ಪೊಲೀಸ್ ಠಾಣೆಯ ಅಧಿಕಾರಿಗಳಾದ ಎಸ್.ಪಿ.ಒ.ಬಾಸಿಲ್,  ಶಫೀಖ್, ವನಿತಾ ಪೊಲೀಸ್ ಅಧಿಕಾರಿ ಶಹಾನಾ ಎಂಬುವರನ್ನು ಸಸ್ಪೆಂಡ್ ಮಾಡಲಾಗಿದೆ. ಮೇ.29 ರಂದು ರಾತ್ರಿ ಕ್ರೈಂಬ್ರಾಂಚ್ ಡಿ.ವೈ.ಎಸ್.ಪಿ.ಠಾಣೆಗೆ ಪರಿಶೋಧನೆಗೆಂದು ಆಗಮಿಸಿದಾಗ ಕರ್ತ್ವ್ಗದಲ್ಲಿರಬೇಕಿದ್ದ ಮೂರು ಮಂದಿಯೂ ಗೊರಕೆ ಹೊಡೆಯುತ್ತಿದ್ದರು. ಡಿ.ವೈ.ಎಸ್.ಪಿ.ಯವರು ನೀಡಿದ ವರದಿಯಂತೆ ಕ್ರಮ ಕೈಗೊಳ್ಳಲಾಗಿದೆ. ಅಂದು ಪ್ರಸ್ತುತ ಠಾಣೆಯಲ್ಲಿ ಇಬ್ಬರು ಆರೋಪಿಗಳಿದ್ದರು.

Post a Comment

0 Comments