Ticker

6/recent/ticker-posts

ಇಲೆಕ್ಟ್ರಿಕ್ ಸ್ಕೂಟರ್ ಚಲಾಯಿಸಿದ ಬಾಲಕನ ವಿಡಿಯೊ ಚಿತ್ರೀಕರಿಸಿ ರೀಲ್ಸ್ ಮಾಡಿದ ಪೊಲೀಸ್ ಅಧಿಕಾರಿಯ ಸಸ್ಪೆಂಡ್


 ಕಾಸರಗೋಡು: ಎಲೆಕ್ಟ್ರಿಕ್ ಸ್ಕೂಟರ್ ಚಲಾಯಿಸಿದ ವಿದ್ಯಾರ್ಥಿಯ ವಿಡಿಯೊ ರೀಲ್ಸ್ ಸಾಮಾಜಿಕ ಜಾಲ ತಾಣದಲ್ಲಿ ಪ್ರಚಾರ ಮಾಡಿದ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ. ಕಾಸರಗೋಡು ಎ.ಆರ್.ಕ್ಯಾಂಪಿನ ಪೊಲೀಸ್ ಅಧಿಕಾರಿ ಕೆ.ಸಜೇಶ್ ನನ್ನು ಜಿಲ್ಲಾ ಪೊಲೀಸ್ ವರಿಷ್ಠ ಬಿ.ವಿ.ವಿಜಯ್ ಭಾರತ್ ರೆಡ್ಡಿ ಸಸ್ಪೆಂಡ್ ಮಾಡಿದ್ದಾರೆ. ಲೈಸನ್ಸ್, ಜೆಲ್ಮೆಟ್ ಅಗತ್ಯವಿಲ್ಲದ ಸ್ಕೂಟರ್ ಚಲಾಯಿಸಿದ ಬಾಲಕನನ್ನು ಪೊಲೀಸರು ಠಾಣೆಗೆ ಕೊಂಡು ಹೋಗಿದ್ದರು. ಈ ವೇಳೆ ಸಜೇಶ್ ಕರ್ತವ್ಯದಲ್ಲಿದ್ದು ಈ ದೃಶ್ಯವನ್ನು ಪೊಲೀಸ್ ಅಧಿಕಾರಿ ಸಜೇಶ್ ಸೆರೆ ಹಿಡಿದಿದ್ದು, ಹಿನ್ನೆಲೆಗೆ ಫೂಟ್ಬಾಲ್ ಕಮೆಂಟ್ ತುರುಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದನು. ಇದು ವ್ಯಾಪಕ ಪ್ರಚಾರವಾದ ಹಿನ್ನೆಲೆಯಲ್ಲಿ  ಬಾಲಕನಿಗೆ ಸಾರ್ವಜನಿಕವಾಗಿ ನಡೆದಾಡಲು ಸಾಧ್ಯವಾಗದ ಸ್ಥಿತಿ ಉಂಟಾಯಿತು.  ಈ ಹಿನ್ನೆಲೆಯಲ್ಲಿ ಬಾಲಕ ಹೆತ್ತವರೊಂದಿಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದನು. ಈ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠರು ತಪ್ಪಿತಸ್ಥ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ.

Post a Comment

0 Comments