Ticker

6/recent/ticker-posts

ಎಣ್ಮಕಜೆಯ ಗ್ರಾಮೀಣ ಪ್ರದೇಶಕ್ಕೆ ಸರಕಾರಿ ಗ್ರಾಮ‌ ಬಸ್ ಗೆ ಮನವಿ

 


ಪೆರ್ಲ : ಬಸ್ ಸಂಚಾರವಿಲ್ಲದ ಎಣ್ಮಕಜೆ ಗ್ರಾಮ ಪಂಚಾಯತಿನ ವಿವಿದೆಡೆಗಳಿಗೆ ಸರ್ಕಾರಿ ಗ್ರಾಮ ಬಂಡಿ ಬಸ್ ಗೆ ಆಗ್ರಹ.  ವಾಣಿನಗರ, ಕಾಟುಕುಕ್ಕೆ, ಬಜಕೂಡ್ಲು, ಖಂಡಿಗೆ ಎಂಬೀ ಸ್ಥಳಗಳಲ್ಲಿ ಬಸ್ ಓಡಾಟವಿಲ್ಲದೆ ಈ ಪ್ರದೇಶದ ಜನತೆ ದಿನ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದು ಈ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಗ್ರಾಮ ಬಸ್ ನ್ನು ಸಂಚರಿಸುವಂತಾಗಿಸಬೇಕೆಂದು ಆಗ್ರಹಿಸಿ ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಎಚ್. ಆರೀಸ್ ಶೇಣಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ಶೆಣೈ, ಶೇರಿಫ್ ಪೆರ್ಲ ಜತೆಗಿದ್ದರು.

Post a Comment

0 Comments