ಬದಿಯಡ್ಕ: ಬಿದ್ದು ಸಿಕ್ಕಿದ ಒಂದೂವರೆ ಪವನು ಚಿನ್ನಾಭರಣವನ್ನು ಪೊಲೀಸ್ ಠಾಣೆಗೆ ತಲುಪಿಸಿದ ಯುವಕರನ್ನು ಪೊಲೀಸರು ಅಭಿನಂದಿಸಿದ್ದಾರೆ. ಬದಿಯಡ್ಕದಲ್ಲಿ ಹಣಕಾಸು ಸಂಸ್ಥೆ ನಡೆಸುತ್ತಿರುವ ಬೋಳುಕಟ್ಟೆಯ ಜಗನ್ನಾಥ ರೈ ಕೊರೆಕಾನ, ನವೀನ ನೀರ್ಚಾಲು ಎಂಬುವರನ್ನು ಪೊಲೀಸರ ಜತೆಗೆ ಸಾರ್ವಜನಿಕರೂ ಶ್ಲಾಘಿಸಿದ್ದಾರೆ.
ಬದಿಯಡ್ಕ ಪೇಟೆಯ ಶಾಪಿಂಗ್ ಕಾಂಪ್ಲೆಕ್ಸ್ ಬಳಿಯಿಂದ ಬಿದ್ದು ಸಿಕ್ಕಿದ ಚಿನ್ನವನ್ನು ಕೂಡಲೇ ಬದಿಯಡ್ಕ ಪೊಲೀಸ್ ಠಾಣೆಗೆ ತಲುಪಿಸಿದರು. ಪೊಲೀಸರ ನೇತೃತ್ವದಲ್ಲಿ ಹಾರೀಸ್ ಬದಿಯಡ್ಕ ಹಾಗೂ ಇತರರು ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದರು. ಮೂಕಂಪಾರೆಯ ರಫೀನ ಎಂಬವರ ಚಿನ್ನ ಇದಾಗಿದ್ದು, ಅವರು ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದರು.ಅದರಂತೆ ಬದಿಯಡ್ಕ ಎಸ್.ಐ. ಸುಮೇಶ್ ಬಾಬು, ಚಿನ್ನವನ್ನು ಹಿಂತಿರುಗಿಸಿದರು. ಜಗನ್ನಾಥ ರೈ ಕೊರೆಕಾನ, ನವೀನ ಎಂಬಿವರನ್ನು ಪೊಲೀಸರು ಅಭಿನಂದಿಸಿದರು. ಪೊಲೀಸ್ ಠಾಣೆಯ ಇತರ ಅಧಿಕಾರಿಗಳಾದ ನಿಶಾಂತ್, ವಿಜಿಲ್, ಶಿನು ಮೊದಲಾದವರು ಉಪಸ್ಥಿತರಿದ್ದರು
0 Comments