Ticker

6/recent/ticker-posts

ಶೆಡ್ ನಲ್ಲಿ ಇರಿಸಿದ್ದ 200 ತೆಂಗಿನಕಾಯಿ ಕಳವು; ಇಬ್ಬರು ಆರೋಪಿಗಳ ಸೆರೆ.


 ಕಾಸರಗೋಡು: ಶೆಡ್ ನಲ್ಲಿ ಇರಿಸಿದ್ದ 200 ತೆಂಗಿನಕಾಯಿ ಕಳವುಗೈದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಡನ್ನಕ್ಕಾಡ್ ತೀರ್ಥಂಕರ ನಿವಾಸಿಗಳಾದ ಕೆ.ರಾಜೇಶ್(42), ಕೆ.ರತೀಶ್(45) ಬಂಧಿತರಯ. ಹೊಸದುರ್ಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  ತೀರ್ಥಂಕರೆಯ ಶೆಡ್ ಒಂದರಿಂದ  209 ತೆಂಗಿನಕಾಯಿ ಕಳವುಗೈದ ಆರೋಪಿಗಳು ಅದನ್ನು ಸುಲಿದು ಮಾರಾಟ ಮಾಡಿದ್ದರು. ಈ ತೆಂಗಿನಕಾಯಿ ಹೊಳೆಯಲ್ಲಿ ಲಭಿಸಿತ್ತೆಂದು ಆರೋಪಿಗಳು ಅಂಗಡಿ ಮಾಲಕನಲ್ಲಿ ಹೇಳಿದ್ದರು. ತೆಂಗಿನಕಾಯಿ ಕಳವು ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು , ತೆಂಗಿನಕಾಯಿ ಖರೀದಿ ಅಂಗಡಿಗಳಲ್ಲಿ ತನಿಖೆ ನಡೆಸಿದ್ದು ಅದರಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಿರಟೆ ಕಳವು, ತೆಂಗಿನ ಕಾಯಿ ಕಳವು ಪ್ರಕರಣ ನಡೆದಿದ್ದು ಆರೋಪಿಗಳನ್ನು ಬಂಧಿಸಲಾಗಿತ್ತು.

Post a Comment

0 Comments