Ticker

6/recent/ticker-posts

ಬದಿಯಡ್ಕ ಪೇಟೆಯ ತಲೆಹೊರೆ ಕಾರ್ಮಿಕ, ಸಕ್ರಿಯ ಸಿಐಟಿಯು ಕಾರ್ಯಕರ್ತ, ಮುಚ್ಚಿರಕಬೆ ನಿವಾಸಿ ಶಂಕರ ಎಂ. ನಿಧನ


 ಬದಿಯಡ್ಕ: ಬದಿಯಡ್ಕ ಪೇಟೆಯ ತಲೆಹೊರೆ ಕಾರ್ಮಿಕ ಅಸೌಖ್ಯದಿಂದಾಗಿ ಮೃತಪಟ್ಟ ಘಟನೆ ನಡೆದಿದೆ. ಸಕ್ರಿಯ ಸಿಐಟಿಯು ಕಾರ್ಯಕರ್ತ, ಕಾಡಮನೆ ಮಾಡತ್ತಡ್ಕ ಮುಚ್ಚಿರಕಬೆ ನಿವಾಸು ಶಂಕರ ಎಂ,(56) ಮೃತಪಟ್ಟ ಕಾರ್ಮಿಕ. ಆದಿತ್ಯವಾರದಂದು ಇವರಿಗೆ ಅಸೌಖ್ಯ ಕಾಣಿಸಿಕೊಂಡಿದ್ದು ಕೂಡಲೇ ಕಾಸರಗೋಡು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಪಿಲಾಕಾರಿಯಾಗದ ಹಿನ್ನೆಲೆಯಲ್ಲಿ ಅವರು ಇಂದು (ಮಂಗಳವಾರ) ಮುಂಜಾನೆ ಕೊನೆಯುಸಿರೆಳೆದರು. ಶಂಕರ ಅವರು ಕಳೆದ 25 ವರ್ಷಗಳಿಂದ ಬದಿಯಡ್ಕ ಪೇಟೆಯಲ್ಲಿ ತಲೆಹೊರೆ ಕಾರ್ಮಿಕರಾಗಿದ್ದಾರೆ. ದಿವಂಗತರಾದ ಚುಕ್ರ- ಮಾಹಿಲು ದಂಪತಿಯ ಪುತ್ರರಾದ ಮೃತರು ಪತ್ನಿ ಪೂರ್ಣಿಮ (ಅಂಗನವಾಡಿ ಸಹಾಯಕಿ ಮಾಡತ್ತಡ್ಕ),  ಮಕ್ಕಳಾದ ಮಂಜುನಾಥ, ಮನೀಶ, ಮಜುಶ, ಸಹೋದರ ಬಾಬು ಮುಚ್ಚಿರಕಬೆ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Post a Comment

0 Comments