Ticker

6/recent/ticker-posts

ಅಗಸ್ಟ್ 10 ರಂದು ನಡೆಯುವ ಜಿಲ್ಲಾ ಮಟ್ಟದ ಬಂಟರ ಆಟಿದ ಕೂಟ ಕಾರ್ಯಕ್ರಮ; ಯಶಸ್ವಿಗಾಗಿ ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಹಾಗೂ ಆಯೋಜಕ ಸಮಿತಿಯಿಂದ ಐಲ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ


 ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ನೇತೃತ್ವದಲ್ಲಿ ಕೆ.ಕೆ.ಶೆಟ್ಟಿ ಕುತ್ತಿಕಾರು ಹಾಗೂ ಜಿಲ್ಲಾ ಬಂಟರ ಸಂಘದ ಸಹಭಾಗಿತ್ವದಲ್ಲಿ ಇತಿಹಾಸ ಪ್ರಸಿದ್ದ ಮಂಗಲ್ಪಾಡಿ ಮನೆಯ ಗದ್ದೆಯಲ್ಲಿ ಅಗಸ್ಟ್ 10 ರಂದು ನಡೆಯುವ ಜಿಲ್ಲಾ ಮಟ್ಟದ ಬಂಟರ ಆಟಿದ ಕೂಟ ಕಾರ್ಯಕ್ರಮ ನಡೆಯಲಿದೆ. 
ಇದರ ಪೂರ್ವಭಾವಿಯಾಗಿ ಕಾರ್ಯಕ್ರಮದ ಯಶಸ್ವಿಗಾಗಿ ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಹಾಗೂ ಆಯೋಜಕ ಸಮಿತಿಯ ಸದಸ್ಯರುಗಳು ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 

ಅಲ್ಲದೆ ಕಾರ್ಯಕ್ರಮ ನಡೆಯುವ ಮಂಗಲ್ಪಾಡಿ ಮನೆಗೆ ಬೇಟಿ ನೀಡಿ ಕಾರ್ಯಕ್ರಮದ ಸಿದ್ದತೆಯ ಬಗ್ಗೆ ಅವಲೋಕಿಸಿದರು. ಈ ಸಂದರ್ಭದಲ್ಲಿ  ಸಂಘಟಕ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

Post a Comment

0 Comments