ಕೊಲ್ಲಂನಲ್ಲಿ ಬಂದಡ್ಕ ನಿವಾಸಿ ಪತ್ನಿಯನ್ನು ಪತಿ ಇರಿದು ಕೊಲೆಗೈದ ಘಟನೆ ನಡೆದಿದೆ. ಬಂದಡ್ಕ ಪೇಟೆಯ ಸಮೀಪದ ಕಾವೇರಿಯವರ ಪುತ್ರಿ ರತಿ ಯಾನೆ ಆರತಿ(36) ಮೃತಪಟ್ಟ ಯುವತಿ . ಈಕೆಯ ಪತಿ ಜಿನು ಇದೀಗ ಪೊಲೀಸರ ಕಸ್ಡಡಿಯಲ್ಲಿದ್ದಾನೆ. ನಿನ್ನೆ (ಗುರುವಾರ) ರಾತ್ರಿ 10.25 ರ ವೇಳೆ ಈ ಘಟನೆ ನಡೆದಿದೆ.
17 ವರ್ಷಗಳ ಹಿಂದೆ ಜಿನು- ಆರತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಮದ್ಯೆ ದಂಪತಿಯ ಜೀವನದಲ್ಲಿ ಒಡಕು ಕಾಣಿಸಿಕೊಂಡಿದ್ದು ಆರತಿ ಬೇರೊಂದು ಕಡೆ ಮನೆ ಕೆಲಸ ಕೆಲಸ ಮಾಡುತ್ತಾ ಅಲ್ಲೇ ಇರುತ್ತಿದ್ದಳು. ಪತಿ ಜಿನು ಆಕೆ ವಾಸವಾಗಿದ್ದ ಮನೆಗೆ ಅತಿಕ್ರಮಿಸಿ ಬಂದು ಪತ್ನಿಯನ್ನು ಇರಿದು ಕೊಲೆಗೈದನೆನ್ನಲಾಗಿದೆ. ಅನಂತರ ಜಿನು ಈ ಮಾಹಿತಿಯನ್ನು ಗೆಳೆಯರಿಗೂ ಪೊಲೀಸರಿಗೂ ನೀಡಿದನು. ಅದರಂತೆ ಪೊಲೀಸರು ಆಗಮಿಸಿ ಜಿನುವನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮಾಹಿತಿ ತಿಳಿದು ಆರತಿಯ ಬಂದಡ್ಕದ ಸಂಬಂಧಿಕರು ಕೊಲ್ಲಂಗೆ ಹೊರಟಿದ್ದಾರೆ
0 Comments