Ticker

6/recent/ticker-posts

ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ಮಹಿಳಾ ಸಮಿತಿ ಆಶ್ರಯದಲ್ಲಿ ಯಶಸ್ವೀ ಬಿರಿಯಾಣಿ ಚಾಲೆಂಜ್; ಬೀಜಂತ್ತಡ್ಕ ಸ್ನೇಹಾಲಯ ವಾಸಿಗಳಿಗೆ ಒಂದು ಹೊತ್ತಿನ ಊಟ ವಿತರಣೆ


 ಬದಿಯಡ್ಕ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ನವೀಕರಣದ ಅಂಗವಾಗಿ ಧನ ಸಂಗ್ರಹಾರ್ಥ ಮಹಿಳಾ ಸಮಿತಿಯ ಆಶ್ರಯದಲ್ಲಿ ನಡೆದ ಬಿರಿಯಾಣಿ ಚಾಲೆಂಜ್ ಹೆಚ್ಚು ಜನಪ್ರಿಯವಾಯಿತು. ಇದರ ಅಂಗವಾಗಿ ಬೀಜಂತ್ತಡ್ಕ ಅಸೀಸಿ ಸ್ನೇಹಾಲಯದಲ್ಲಿ ಒಂದು ಹೊತ್ತಿನ ಆಹಾರ ವಿತರಣೆ ನಡೆಯಿತು.

  ಬಿರಿಯಾಣಿ ಚಾಲೆಂಜ್ ಗೆ ಹೆಚ್ಚು ಜನರು ಸಹಕಾರ ನೀಡಿ ಯಶಸ್ವಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ   ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಭರಣ ಸಮಿತಿ ಉಪಾಧ್ಯಕ್ಷ ಹಾಗೂ ಪ್ರವಾಸಿ ಸಮಿತಿ ಅಧ್ಯಕ್ಷ ಶಶಿಧರ ಚೇಡಿಕಾನ ಅವರ ವತಿಯಿಂದ ಸ್ನೇಹಾಲಯದ ವಾಸಿಗಳಿಗೆ ಮದ್ಯಾಹ್ನದೂಟ ನೀಡಲಾಯಿತು. ಭರಣ ಸಮಿತಿ ಅಧ್ಯಕ್ಷ ವಸಂತನ್ ಚೇಂಬೋಡು, ಇತರರಾದ ರತೀಶ್ ಮಾಸ್ತರ್ ನೆಕ್ರಾಜೆ, ಚಂದ್ರನ್ ಪೊಯ್ಯಕಂಡ, ಪುರುಷೋತ್ತಮನ್ ನೆಕ್ರಾಜೆ, ಸರಿತ ಶಶಿಧರನ್, ಜಯ ವಿನೋದ್, ಭಾರತೀ ವಸಂತನ್,ರಮ್ಯ ದಯನ್ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments