Ticker

6/recent/ticker-posts

ತಂಗಿಯ ಜತೆ ಆಟವಾಡುತ್ತಿರುವ ವೇಳೆ ತೋರ್ತು ಬಟ್ಟೆ ಕುತ್ತಿಗೆಗೆ ಸಿಲುಕಿ 9 ನೇ ತರಗತಿ ವಿದ್ಯಾರ್ಥಿ ಮೃತ್ಯು


 ತಂಗಿಯ ಜತೆ ಆಟವಾಡುತ್ತಿರುವ ವೇಳೆ ತೋರ್ತು ಬಟ್ಟೆ ಕುತ್ತಿಗೆಗೆ ಸಿಲುಕಿ 9 ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಕಾಞರಪಳ್ಳಿ ಮಞಪಳ್ಳಿ  ಸುನೀಶ್ ಎಂಬವರ ಪುತ್ರ ವಿ.ಎಸ್.ಕಿರಣ್(14) ಮೃತಪಟ್ಟ ಬಾಲಕ. ತಾಯಿ ರೋಶಿನಿ ಜತೆ ವಾಸಿಸುವ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ.

 ‌‌ಮಕ್ಕಳಿಬ್ಬರೂ ಆಟವಾಡುತ್ತಿದ್ದ ವೇಳೆ ಕಿರಣ್ ತೋರ್ತು ಬಟ್ಟೆಯನ್ನು ಕುತ್ತಿಗೆಗೆ ಸಿಲುಕಿಸಿ ಮೇಲಕ್ಕೆ ಕಟ್ಟಿದನೆನ್ನಲಾಗಿದೆ. ಈ ವೇಳೆ ಕುತ್ತಿಗೆ ಬಿಗಿದಿದ್ದು, ತಾಯಿ ರೋಶಿನಿ ಕೂಡಲೇ ಬಟ್ಟೆ ತುಂಡರಿಸಿ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ಮೃತ ಕಿರಣ್ 9 ನೇ ತರಗತಿಯ ವಿದ್ಯಾರ್ಥಿ

Post a Comment

0 Comments