ಪೆರ್ಲ : ಶನಿವಾರ ಸಂಜೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಶೇಣಿಯ ಬಿಜೆಪಿ ಮುಖಂಡ ರವಿ ಭಂಡಾರಿ ಎಂಬವರ ಕಾರಿನ ಮೇಲೆ ಮರ ಬಿದ್ದು ಹಾನಿಯಾಗಿದೆ. ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಿಟ್ಲ ಆಸ್ಪತ್ರೆಗೆ ತೆರಳಿ ಹಿಂತಿರುಗುವ ವೇಳೆ ಕೇಪು ಬಳಿ ವಿದ್ಯುತ್ ಕಂಬ ಮತ್ತು ಮರವು ಮುರಿದು ಇವರು ಸಂಚರಿಸುತಿದ್ದ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕುಟುಂಬವು ಅಪಾಯದಿಂದ ಪಾರಾಗಿದೆ.
ಸ್ಥಳಕ್ಕೆ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಕೆ.ಪಿ. ಅನಿಲ್ ಕುಮಾರ್ ಹಾಗೂ ಶೇಣಿ ಮಣಿಯಂಪಾರೆಯ ಹಲವಾರು ಬಿಜೆಪಿ ಕಾರ್ಯಕರ್ತರು ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ಪಾಲ್ಗೊಂಡರು.
0 Comments