Ticker

6/recent/ticker-posts

ದಿವಂಗತ ಕರುಣಾಕರ ರೈ ಅವರ ಪತ್ನಿ, ಉಮಾವತಿ ರೈ ನಿಧನ


ಕಾಸರಗೋಡು:   ದಿವಂಗತ ಕರುಣಾಕರ ರೈ ಅವರ ಪತ್ನಿ, ಉಮಾವತಿ ರೈ(72) ನಿಧನರಾದರು. ಅವರು ಇಂದು (ಸೋಮವಾರ) ಮುಂಜಾನೆ ಕಾಸರಗೋಡು ಅಡ್ಕತ್ತಬೈಲಿನಲ್ಲಿರುವ ಮಗಳ‌ ಮನೆಯಲ್ಲಿ  ಕೊನೆಯುಸಿರೆಳೆದರು. ಇವರು ಗೋಸಾಡ ಶ್ರೀ ಮಹಿಷಮರ್ದಿನಿ ಮಾತೃ ಮಂಡಳಿಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಅಲ್ಲದೆ ಹಲವು ಧಾರ್ಮಿಕ ವಲಯಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪುತ್ರಿ ಮಾಲತಿ ರೈ (ಅಡ್ಕತ್ತಬೈಲು) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಪುತ್ರ ರಾಧಾಕೃಷ್ಣ ರೈ, ಅಳಿಯ ವಿಜಯ ರೈ ಈ ಹಿಂದೆಯೇ ನಿಧನರಾಗಿದ್ದರು. ಮೃತರ ಅಂತ್ಯಸಂಸ್ಕಾರ ಅಡ್ಕತ್ತಬೈಲಿನಲ್ಲಿ ನಡೆಯಿತು

Post a Comment

0 Comments