ನೀರ್ಚಾಲು: ಬಾಡಿಗೆ ಕ್ವಾಟರ್ಸಿನಲ್ಲಿ ವಾಸಿಸುವ ಲಾಟರಿ ಮಾರಾಟಗಾರ ನಿಧನರಾಗಿದ್ದಾರೆ. ಪಾಲಕ್ಕಾಡ್ ಪತ್ತಿರಪಾರ ನಿವಾಸಿ ಹಾಗೂ ಕೊಲ್ಲಂಗಾನದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಎನ್.ಟಿ.ಪ್ರಕಾಶನ್ ಮೃತಪಟ್ಟ ವ್ಯಕ್ತಿ. ನಿನ್ನೆ (ಆದಿತ್ಯವಾರ) ಬೆಳಗ್ಗೆ ಮಲಗುವ ಕೋಣೆಯಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಕಂಡು ಬಂದ ಇವರನ್ನು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಮೃತಪಟ್ಟಿದ್ದರು. ಇವರು ಕಳೆದ 12 ವರ್ಷಗಳಿಂದ ಲಾಟರಿ ಮಾರಾಟಗಾರರಾಗಿದ್ದು ಚಿರಪರಿಚಿತರಾಗಿದ್ದರು
ಮೃತರು ಪತ್ನಿ ವತ್ಸಲ, ಪುತ್ರ ಪ್ರಸಾದ್, ಸಹೋದರರಾದ ಸಂತೋಷ್, ರಾಜೀವನ್, ಸಹೋದರಿ ಕೋಮಳ ಎಂಬಿವರನ್ನು ಅಗಲಿದ್ದಾರೆ
ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು
0 Comments